ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರಕ್ಕೆ ಹೋಗದ ಮೊದಲ ಚುನಾವಣೆ: ಯಡ್ಡಿ ವ್ಯಥೆ

By Srinath
|
Google Oneindia Kannada News

udupi-chikmagalur-first-election-to-miss-bsy
ಗುಲ್ಬರ್ಗ, ಮಾ. 26: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ಭಾನುವಾರ ಸುದ್ದಿಗಾರರೊಂದಿಗೆ ಸಾಕಷ್ಟು ಮಾತನಾಡಿದ್ದಾರೆ. ಅದು ಸಾಕಷ್ಟು ಚಿಂತನೆಗೆ ಗ್ರಾಸವೂ ಒದಗಿಸಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸೋತಿರುವುದಕ್ಕೆ ತೀವ್ರ ಬೇಸರ ಸಹ ವ್ಯಕ್ತಪಡಿಸಿದ್ದಾರೆ.

'ಯಡಿಯೂರಪ್ನೋರು ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ಮಿಸ್ ಮಾಡಿಕೊಂಡಿದ್ದರೂ ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡಿದ್ದಾರೆ' ಎಂದು ಅವರ ಅಭಿಮಾನಗಳೇ ಗೋಳಾಡಿದ್ದಾರೆ.

ನನ್ನ ರಾಜಕೀಯ ಬದುಕಿನಲ್ಲಿ (ಗ್ರಾಮ ಪಂಚಾಯಿತಿಯಿಂದ ಸಂಸತ್ ತನಕ) ಪ್ರಚಾರಕ್ಕೆ ಹೋಗದ ಮೊದಲ ಚುನಾವಣೆ ಇದು ಎಂದು ಅವರು ವ್ಯಥೆ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ 8 ಕೇಸುಗಳು ಇನ್ನೂ ಬಾಕಿ ಇವೆ ಎಂದು ಸ್ವತಃ ಸಿಎಂ ಹೇಳಿದ್ದರು. ಹೀಗಾಗಿ ಯಾರಿಗೂ ಮುಜುಗರ ಬೇಡ ಎಂದು ಪ್ರಚಾರಕ್ಕೆ ಹೋಗಿರಲಿಲ್ಲ. ಆದರೆ ಅದರಿಂದ ಸೋಲಾಗಲಿಲ್ಲ. ಸೋಲಿನಲ್ಲಿ ನನ್ನ ಪಾತ್ರವೂ ಇಲ್ಲ. ಮುಂದಿನ ಬಾರಿ ಪ್ರಚಾರಕ್ಕೆ ಹೋಗುತ್ತೇನೆ ಎಂದು ಚುನಾವಣೆ ಭರವಸೆ ನೀಡಿದರು.

ಒತ್ತಡದಿಂದ ರೆಸಾರ್ಟ್‌ಗೆ: ರೆಸಾರ್ಟ್‌ಗೆ ಹೋಗಿದ್ದೂ ತಮಗೆ ಸಮಾಧಾನ ತಂದಿಲ್ಲ ಎಂದ ಅವರು, ಯಡಿಯೂರಪ್ಪ ಹಿಂದೆ 10 ಶಾಸಕರೂ ಇಲ್ಲ ಎಂದು ಬಿಜೆಪಿ ಕಚೇರಿಯಿಂದ ಹೈಕಮಾಂಡ್‌ಗೆ ಮಾಹಿತಿ ಹೋಗುತ್ತಿತ್ತು. ಅದಕ್ಕಾಗಿ ನಮ್ಮ ಬೆಂಬಲಿಗರು ರೆಸಾರ್ಟ್‌ನಲ್ಲಿ ಸೇರಿದ್ದರು. ಅವರ ಒತ್ತಾಯಕ್ಕೆ ಮಣಿದು ನಾನೂ ಅಲ್ಲಿಗೆ ಹೋದೆ. ಆದರೆ ಇದರ ಬಗ್ಗೆ ನನಗೂ ಸಮಾಧಾನವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಆದರೆ ಈಗ ಬರೀ 70 ಮಂದಿ ಶಾಸಕರು ಮಾತ್ರವಲ್ಲ, 120 ಮಂದಿ ಒಟ್ಟುಗೂಡುವ ಕಾರ್ಯಕ್ರಮ ರೂಪಿಸುತ್ತೇನೆ. ಇನ್ನಷ್ಟು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತೇನೆ. ನಮ್ಮ ಪಕ್ಷದವರು ಕರೆದ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಘೋಷಿಸಿದರು.

English summary
Karnataka BJP battle - It seems Karnataka Ex CM BS Yeddyurappa has back stepped against BJP High Command. And he felt very sad about missing the canvass for Udupi Chikmagalur bypolls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X