ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಮಹಿಳೆಯರಿಗೆ ವಿವಾಹ ವಿಚ್ಛೇದನ ಇನ್ನು ಬಹು ಸುಲಭ

|
Google Oneindia Kannada News

Divorce made easier
ನವದೆಹಲಿ, ಮಾ 24: ಕೇಂದ್ರ ಸರಕಾರ ಹಿಂದೂ ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ವಿಚ್ಛೇದನ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕೃತ ಗೊಳಿಸುವ ನಿಟ್ಟಿನಲ್ಲಿ ಸಂಸದೀಯ ಸಮಿತಿ ಮಾಡಿದ್ದ ನಾಲ್ಕು ಪ್ರಮುಖ ಶಿಫಾರಸುಗಳನ್ನು ಕೇಂದ್ರ ಅಂಗೀಕರಿಸಿದ್ದು ಶೀಘ್ರ ಸಂಪುಟ ಸಭೆಯಲ್ಲಿ ಮಂಡಿಸಲು ಸಿದ್ದತೆ ನಡೆಸಿದೆ.

ಕರಡು ಮಸೂದೆ ಸಂಪುಟದಲ್ಲಿ ಅನುಮೋದನೆ ಪಡೆದು, ಸಂಸತ್ತಿನಲ್ಲಿ ಮಂಡನೆಯಾಗಿ ಒಪ್ಪಿಗೆಯಾದರೆ ಆ ಬಳಿಕ ವಿಚ್ಛೇದನ ಅತ್ಯಂತ ಸರಳವಾಗಲಿದೆ. ಅಲ್ಲದೆ ವಿಚ್ಛೇದನ ಪಡೆಯುವ ಮಹಿಳೆಯರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಕರಡು ಮಸೂದೆಯಲ್ಲಿರುವ ಪ್ರಮುಖ ಅಂಶಗಳು:

1. ವಿವಾಹ ನಂತರ ಗಳಿಸಿದ ಆಸ್ತಿಯಲ್ಲಿ ವಿಚ್ಛೇದಿತ ಮಹಿಳೆಗೂ ಸಮಪಾಲು.
2. ದತ್ತು ಮಕ್ಕಳಿಗೂ ಸ್ವಂತ ಮಕ್ಕಳಷ್ಟೇ ಹಕ್ಕು.
3. ಗಂಡ ಹೆಂಡತಿ ಬೇರಾಗಲು ಬಯಸಿದರೆ ಕಾಲಾವಕಾಶ ಸಂಪೂರ್ಣ ಮನ್ನಾ ಮಾಡಿ ಕೂಡಲೇ ವಿಚ್ಛೇದನ.
4. ಗಂಡ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದರೆ, ಅದನ್ನು ವಿರೋಧಿಸುವ ಹಕ್ಕು ಹೆಂಡತಿಗೆ.
5. ವಿಚ್ಛೇದನ ಬಳಿಕ ಗಂಡ ತನ್ನ ಸ್ಥಿರಾಸ್ತಿಯನ್ನು ತನ್ನ ಬಳಿ ಇಟ್ಟುಕೊಳ್ಳಲು ನಿರ್ಧರಿಸಿದರೆ, ಅದಕ್ಕೆ ಬದಲಾಗಿ ಹೆಂಡತಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ನಿರ್ಧರಿಸುವ ಹಕ್ಕು ಸ್ಥಳೀಯ ನ್ಯಾಯಾಲಯಗಳಿಗೆ.

English summary
The new amendments in the Hindu Marriage Act will make divorce easier. The 6-month clause for irretrievable breakdown has been removed in the new amendments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X