ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ 224 ಶಾಸಕರ ಕೈಗೆ ಸಿಕ್ತು ಹೊಸ ಐಪ್ಯಾಡ್

By Mahesh
|
Google Oneindia Kannada News

ಬೆಂಗಳೂರು, ಮಾ. 22: ರಾಜ್ಯ ವಿಧಾನಸಭೆಯ ಎಲ್ಲ ಶಾಸಕರಿಗೂ ಬುಧವಾರ(ಮಾ.21) ಐಪ್ಯಾಡ್‌ಗಳನ್ನು ವಿತರಿಸಲಾಗಿದೆ.

ಡಿವಿ ಸದಾನಂದ ಗೌಡರ ಚೊಚ್ಚಲ ಬಜೆಟ್ ಮಂಡನೆಯ ದಿನದಂದೇ ವಿಧಾನಸಭೆಯ ಎಲ್ಲ 224 ಶಾಸಕರಿಗೂ ಬಜೆಟ್ ಮಂಡನೆಯ ಪ್ರತಿಗಳ ಜೊತೆಗೆ ಐಪ್ಯಾಡ್‌ಗಳನ್ನು ವಿತರಿಸಲಾಯಿತು.

ಚೊಚ್ಚಲ ಬಜೆಟ್ ಮಂಡನೆಯ ಖುಷಿಯಲ್ಲಿ ಮುಖ್ಯಮಂತ್ರಿಯಿದ್ದರೆ, ಶಾಸಕರೆಲ್ಲ ಹೊಸ ಐಪ್ಯಾಡ್ ಸಿಕ್ಕ ಸಂತಸದಲ್ಲಿದ್ದರು. [ಐಪ್ಯಾಡ್ ನಲ್ಲಿ ಒನ್ ಒಂಡಿಯಾ ಕನ್ನಡ ಓದಿ]

ಈ ಹಿಂದೆ ವಿಧಾನಪರಿಷತ್‌ನ ಎಲ್ಲ ಸದಸ್ಯರಿಗೂ ಐಪ್ಯಾಡ್‌ಗಳನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಸದಸ್ಯರಿಗೂ ಐಪ್ಯಾಡ್‌ಗಳನ್ನು ನೀಡಬೇಕು ಎಂಬ ಬೇಡಿಕೆಯಿತ್ತು. ಅದರಂತೆ ಇಂದು ಎಲ್ಲ ಶಾಸಕರಿಗೂ ಐಪ್ಯಾಡ್‌ಗಳನ್ನು ನೀಡಲಾಯಿತು.

ಐಪ್ಯಾಡ್‌ಗಳ ಬೆಲೆ ಸುಮಾರು 30 ರಿಂದ 40 ಸಾವಿರ ರೂ.ಗಳವರೆಗಿದ್ದು, ಶಾಸಕರಿಗೆ ಐಪ್ಯಾಡ್ ವಿತರಣೆಯಿಂದ ಸುಮಾರು 80 ಲಕ್ಷದಿಂದ ಒಂದು ಕೋಟಿ ರೂ.ಗಳ ವೆಚ್ಚ ತಗುಲಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಧಾನಸಭೆ ಅಧಿವೇಶನದ ನಡುವೆ ಡರ್ಟಿ ಪಿಕ್ಚರ್ ನೋಡಿ ಸಿಕ್ಕಿಬಿದ್ದಿದ್ದ ಶಾಸಕರಿಗೆ ಕ್ಲೀನ್ ಚಿಟ್ ನೀಡಬಹುದು ಎಂದು ತನಿಖಾ ಸಮಿತಿ ವರದಿ ನೀಡಿದೆ. ಗುಜರಾತಿನಲ್ಲೂ ಕರ್ನಾಟಕ ವಿಧಾನಸಭೆಯಲ್ಲಿ ನಡೆದ ಪ್ರಸಂಗ ರಿಪೀಟ್ ಆಗಿದೆ. ಐಪ್ಯಾಡ್ ನಲ್ಲಿ ಇಬ್ಬರು ಶಾಸಕರು ಏನನ್ನೋ ನೋಡಿದ ಬಗ್ಗೆ ವರದಿಯಾಗಿದೆ.

English summary
Karnataka Budget 2012-13 allocates iPad to all 224 Karnataka MLAs. Chief Minister Sadananda Gowda announced this in the Budget session on 21 st March. We hope MLAs can read Politics, entertainment and scandal news on iPad. Apple iPad supports Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X