ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ 158 ಕೋಟಿ, ಚಿರು ಬಳಿ 99 ಕ್ಯಾರೆಟ್ ವಜ್ರ

By Mahesh
|
Google Oneindia Kannada News

Arun Jaitley Assets
ಬೆಂಗಳೂರು, ಮಾ.22: ಬಿಜೆಪಿ ಹಿರಿಯ ನಾಯಕ, ರಾಜ್ಯಸಭೆ ವಿಪಕ್ಷ ನಾಯಕ ಅರುಣ್ ಜೇಟ್ಲಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದ್ದಾರೆ. ರಾಜ್ಯಸಭೆಗೆ ಮೂರನೇ ಬಾರಿ ಪುನರಾಯ್ಕೆ ಬಯಸಿರುವ ಜೇಟ್ಲಿ ಸದ್ಯಕ್ಕೆ ಕರ್ನಾಟಕ ಬಿಜೆಪಿ ಬಿಕ್ಕಟ್ಟು ಬಗೆ ಹರಿಸಲಿರುವ ಪ್ರಮುಖ ನಾಯಕರಾಗಿದ್ದಾರೆ.

ಜೇಟ್ಲಿ ಅವರ ಸ್ಥಿರಾಸ್ತಿ 38.97 ಕೋಟಿ ರು. ನಿವೇಶನ ಹಾಗೂ ಜಮೀನು ಆಸ್ತಿ ಮೌಲ್ಯ 34.70 ಕೋಟಿ ರು, ಪತ್ನಿ ಸ್ಥಿರಾಸ್ತಿ ಮೊತ್ತ 46 ಕೋಟಿ ರು ಇದೆ. ಒಟ್ಟಾರೆ 158 ಕೋಟಿ ರು ಆಸ್ತಿಯನ್ನು ಅರುಣ್ ಜೇಟ್ಲಿ ಹೊಂದಿದ್ದಾರೆ.

ಇದೇ ರೀತಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಪ್ರಜಾರಾಜ್ಯಂ ಪಕ್ಷದ ಚಿರಂಜೀವಿ ಅವರ ಆಸ್ತಿ ವಿವರ ಇಂತಿದೆ.

ಚರಾಸ್ಥಿ: 16.72 ಕೋಟಿ ರು. ಸ್ಥಿರಾಸ್ಥಿ: 24.76 ಕೋಟಿ ರು, 8 ಕೆಜಿ ಚಿನ್ನ, 20 ಕೆಜಿ ಬೆಳ್ಳಿ, 99 ಕ್ಯಾರೆಟ್ ವಜ್ರ.

ಚಿರಂಜೀವಿ ಪತ್ನಿ ಹೆಸರಿನಲ್ಲಿ ಚರಾಸ್ಥಿ: 15.58 ಕೋಟಿ, ಸ್ಥಿರಾಸ್ಥಿ: 40.86 ಕೋಟಿ, 5.5 ಕೆಜಿ ಚಿನ್ನ, 88 ಕ್ಯಾರೆಟ್ ವಜ್ರ.

ಐಷಾರಾಮಿ ಕಾರುಗಳಾದ ಹೋಂಡಾ ಅಕಾರ್ಡ್, ಎರಡು ಹೋಂಡಾ ಸಿಅರ್ ವಿಯನ್ನು ಚಿರಂಜೀವಿ ಹೊಂದಿದ್ದಾರೆ.

English summary
BJP leader and opposition leader in the Rajya Sabha, Arun Jaitley disclosed his assets worth Rs 158 crore. Apart from Jaitley, Shanker Veghad and Mansukh Mandavia, BJP candidates also declared their assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X