ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ-ಚಿಕ್ಕಮಗಳೂರು ಫಲಿತಾಂಶ Live Coverage

By Mahesh
|
Google Oneindia Kannada News

ಉಡುಪಿ, ಮಾ.21: ಬಹು ನಿರೀಕ್ಷಿತ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. 16ನೇ ಸುತ್ತಿನ ನಂತರವೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡು ಜಯದ ನಗೆ ಬೀರುತ್ತಿದ್ದಾರೆ. ಹೆಗ್ಡೆ ಅವರು 46ಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಪಡೆದಿದ್ದಾರೆ.

ಅಂತಿಮವಾಗಿ 3,92,336 ಮತ ಪಡೆದ ಕಾಂಗ್ರೆಸ್ ನ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಭರ್ಜರಿ ಜಯ ಸಾಧಿಸಿದ್ದಾರೆ. 3,46,329 ಮತ ಪಡೆದು ಬಿಜೆಪಿಯ ಸುನಿಲ್ ಎರಡನೆ ಸ್ಥಾನಕ್ಕೆ ತೃಪ್ತಿ ಪಡೆದಿದ್ದಾರೆ. ಜೆಡಿಎಸ್ ನ ಭೋಜೇಗೌಡರು 70,206 ಮತಗಳೊಂದಿಗೆ ಮೂರನೇ ಸ್ಥಾನಗಳಿಸಿದ್ದಾರೆ.

11.15: ಕಾಂಗ್ರೆಸ್ :3,84,325, ಬಿಜೆಪಿ: 3,38,637, ಜೆಡಿಎಸ್: 67,645

11.05: 45,224 ಮತಗಳ ಅಂತರದ ಲೀಡ್ ನೊಂದಿಗೆ ಜಯ ಪ್ರಕಾಶ ಹೆಗ್ಡೆ ಅವರು 'ಜಯ'ದ ನಗೆ ಬೀರುತ್ತಿದ್ದಾರೆ.

10.55: 12ನೇ ಸುತ್ತಿನಲ್ಲೂ ಕಾಂಗ್ರೆಸ್ ನ ಹೆಗ್ಡೆ ಮುಂದಿದ್ದು, 41,727 ಮತಗಳ ಅಂತರದ ಬೊಂಬಾಟ್ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ :3,52,241, ಬಿಜೆಪಿ: 3,07,017, ಜೆಡಿಎಸ್: 57,717.

10.45: 11ನೇ ಸುತ್ತಿನ ನಂತರ ಹೆಗ್ಡೆ 38,524 ಮತಗಳ ಅಂತರದ ಭರ್ಜರಿ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ :3,00,407, ಬಿಜೆಪಿ: 2,61,883, ಜೆಡಿಎಸ್: 50,091

s24452,h 27655,b 3739
10.30: 10ನೇ ಸುತ್ತಿನ ಮತ ಎಣಿಕೆಯಲ್ಲೂ ಕೈಗೆ ಮುನ್ನಡೆ. 33 384 ಮತಗಳ ಮುನ್ನಡೆ ಪಡೆದ ಹೆಗ್ಡೆ ನಾಗಾಲೋಟ ಮುಂದುವರೆಸಿದ್ದಾರೆ. ಕಾಂಗ್ರೆಸ್ : 2,37,778, ಬಿಜೆಪಿ: 2,71,162, ಜೆಡಿಎಸ್: 46,873.

10ನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಸಿಕ್ಕ ಮತಗಳು : ಸುನಿಲ್ : 23,710; ಹೆಗ್ದೆ: 27,507; ಭೋಜೇಗೌಡ :3,211

10.20: 9ನೇ ಸುತ್ತಿನ ನಂತರ ಜಯಪ್ರಕಾಶ್ ಹೆಗ್ಡೆ ಅವರು 29, 587 ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ : 2,43,655, ಬಿಜೆಪಿ: 2,14,068, ಜೆಡಿಎಸ್: 43,662

9ನೇ ಸುತ್ತಿನ ಅಭ್ಯರ್ಥಿಗಳಿಗೆ ಬಂದ ಮತಗಳು ಸುನಿಲ್ :23,788, ಹೆಗ್ಡೆ:25,869, ಭೋಜೇಗೌಡ:5,068

10.15: 8ನೇ ಸುತ್ತಿನ ಆರಂಭಕ್ಕೆ ಹೆಗ್ಡೆ 27,706 ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ : 2,17,786, ಬಿಜೆಪಿ: 1,90,280, ಜೆಡಿಎಸ್: 38,591.

10.10: 7ನೇ ಸುತ್ತಿನ ನಂತರ ಕಾಂಗ್ರೆಸ್ಸಿನ ಹೆಗ್ಡೆ ಅವರು 22,555 ಮತಗಳ ಅಂತರದಿಂದ ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್ : 1,89,950, ಬಿಜೆಪಿ: 1,67,395, ಜೆಡಿಎಸ್: 34,598.

9.55: 6ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಜಯಪ್ರಕಾಶ್ ಹೆಗ್ಡೆ ಒಟ್ಟಾರೆ15,089 ಅಂತರದ ಮುನ್ನಡೆ.
ಕಾಂಗ್ರೆಸ್ :
1,34,570, ಬಿಜೆಪಿ : 1,22,922, ಜೆಡಿಎಸ್ : 25,331.

9.45: 5ನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಮುನ್ನಡೆ ಪಡೆದಿದೆ.ಹೆಗ್ಡೆ 11,648 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ : 1,34,570, ಬಿಜೆಪಿ : 1,22,922, ಜೆಡಿಎಸ್ : 25,331.

9.30: 4ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ, ಜಯಪ್ರಕಾಶ್ ಹೆಗ್ಡೆ 8,353 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ : 1,06,983, ಬಿಜೆಪಿ : 98,630, ಜೆಡಿಎಸ್ : 19,748.

4ನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಬಂದ ಮತಗಳು : ಸುನಿಲ್: 25,147, ಹೆಗ್ಡೆ: 26,908, ಭೋಜೇಗೌಡ :4397

9.15: ಮೂರನೇ ಸುತ್ತಿನ ಮತ ಎಣಿಕೆ ನಡೆದಿದ್ದು, ಪಕ್ಷದ ಬಲಾಬಲ: ಕಾಂಗ್ರೆಸ್ : 80,075, ಬಿಜೆಪಿ : 73,483, ಜೆಡಿಎಸ್ : 15,351. ಜಯಪ್ರಕಾಶ್ ಹೆಗ್ಡೆ ಅವರು 6,592 ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

9.10: 2ನೇ ಸುತ್ತಿನ ಮತ ಎಣಿಕೆ ಕಾರ್ಯ ನಡೆದಿದ್ದು, ಜಯಪ್ರಕಾಶ್ ಹೆಗ್ಡೆ ಅವರು 5,018 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ : 53,213, ಬಿಜೆಪಿ: 48,195, ಜೆಡಿಎಸ್ : 9526.

9.00: ಮೊದಲ ಸುತ್ತಿನ ನಂತರ ಅಂತಿಮ ಅಂಕಿ ಅಂಶ: ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ಸುನಿಲ್ ಅವರಿಗಿಂತ 2795 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ : 25,561, ಬಿಜೆಪಿ: 22,766, ಜೆಡಿಎಸ್ : 4,397.

8.50: ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮಾಧ್ಯಮಗಳಿಗೆ ಮಾಹಿತಿ ನೀಡಲು ಚುನಾವಣಾಧಿಕಾರಿ ಎಂಟಿ ರೇಜು ನಿರಾಕರಿಸಿದ ಘಟನೆ ನಡೆದಿದೆ.

8.45: ಎರಡನೇ ಸುತ್ತಿನ ಎಣಿಕೆ ಕಾರ್ಯ ಮುಂದುವರೆದಿದ್ದು ಮೊದಲ ಬಾರಿಗೆ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಜಯಪ್ರಕಾಶ್ ಹೆಗ್ಡೆಗೆ 4694 ಮತಗಳು, ಸುನಿಲ್ ಗೆ 3407 ಮತಗಳು ಲಭಿಸಿದೆ.

8.30: ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಆರಂಭ. ಸುನಿಲ್ 51 ಮತಗಳಿಂದ ಮುನ್ನಡೆ...ಮೊದಲ ಸುತ್ತಿನ ನಂತರ ಬಿಜೆಪಿ ಮೊದಲ ಸ್ಥಾನ, ಕಾಂಗ್ರೆಸ್ ಎರಡನೇ ಸ್ಥಾನ ಹಾಗೂ ಜೆಡಿಎಸ್ ಮೂರನೇ ಸ್ಥಾನ.

8:15: ಮೊದಲಿಗೆ ಅಂಚೆ ಮೂಲಕ ಬಂದ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗಿದೆ. ಸುಮಾರು 1,000 ಮತಗಳನ್ನು ಎಣಿಸಲಾಗುತ್ತದೆ. ಬಿಜೆಪಿಯ ಸುನಿಲ್ ಕುಮಾರ್ ಅವರು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರಿಗಿಂತ 160 ಮತಗಳಿಂದ ಮುಂದಿದ್ದಾರೆ.

ಮಾ.21ರಂದು ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು, ಒಟ್ಟು 16 ಸುತ್ತಿನ ಮತ ಎಣಿಕೆ ಕಾರ್ಯ ನಡೆಯಲಿದೆ. ಸುಮಾರು 11 ಗಂಟೆ ವೇಳೆಗೆ ಸ್ಪಷ್ಟ ಫಲಿತಾಂಶ ಸಿಗುವ ನಿರೀಕ್ಷೆಯಿದೆ.

English summary
Udupi Chikmagalur Lok Sabha By-election 2012 Results - live on Oneindia Kannada. Congress nominee Jayaprakash Hegde wins by a margin of over 46,000 votes against his immediate rival Sunil Kumar of BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X