ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಬಾವುಟ ಹಾರಿಸುವುದು ಕಡ್ಡಾಯ : ಗೌಡ

By Prasad
|
Google Oneindia Kannada News

Hoisting Kannada flag on November 1 compulsory
ಬೆಂಗಳೂರು, ಮಾ. 21 : ಚೊಚ್ಚಲ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಗೆದ್ದಿದ್ದಾರೋ, ಬಿದ್ದಿದ್ದಾರೋ ಕಾಲವೇ ನಿರ್ಧರಿಸಲಿದೆ. ಆದರೆ, ಕರುನಾಡಿನ ಹುಟ್ಟುಹಬ್ಬ, ನವೆಂಬರ್ 1ರಂದು ಕರ್ನಾಟಕದಾದ್ಯಂತ ಕನ್ನಡ ಬಾವುಟವನ್ನು ಹಾರಿಸುವುದನ್ನು ಕಡ್ಡಾಯ ಮಾಡಿರುವುದು ಮಾತ್ರ ಪಂಚಕೋಟಿ ಕನ್ನಡಿಗರ ಮನವನ್ನು ಖಂಡಿತವಾಗಿ ಗೆದ್ದಿದೆ.

ಪ್ರತಿ ನವೆಂಬರ್ 1, ಕನ್ನಡ ರಾಜ್ಯೋತ್ಸವದಂದು ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಮೇಲೆ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಬೇಕೆಂದು ಸದಾನಂದ ಗೌಡರು ಆಜ್ಞೆ ಹೊರಡಿಸಿದ್ದಾರೆ. ಸರಕಾರಿ ಕಚೇರಿ ಮಾತ್ರವಲ್ಲ ಇಲ್ಲಿರುವ ಎಲ್ಲ ಖಾಸಗಿ ಕಚೇರಿಗಳ ಮೇಲೆಯೂ ಕನ್ನಡ ಬಾವುಟ ಹಾರಿಸುವುದು ಕಡ್ಡಾಯ ಮಾಡಿದ್ದರೆ ಇನ್ನೂ ಚೆಂದಾಗಿರುತ್ತಿತ್ತು.

ಇದಲ್ಲದೆ, ಕನ್ನಡ ನಾಡಿನಲ್ಲಿ ಕನ್ನಡಮಯ ವಾತಾವರಣವನ್ನು ಸೃಷ್ಟಿಸುವ ಮತ್ತು ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅನೇಕ ಅನುದಾನಗಳನ್ನು ಸದಾನಂದ ಗೌಡರು ಹರಿಯಬಿಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದುದೆಂದರೆ, ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 269 ಕೋಟಿ ರು. ಅನುದಾನ ನೀಡಲಾಗಿದೆ.

ಕರ್ನಾಟಕದ ಹೆಮ್ಮೆಯ ಮೈಸೂರು ಅರಮನೆ 100 ವರ್ಷ ಪೂರೈಸಿರುವ ಸಂದರ್ಭದಲ್ಲಿ ಅಲ್ಲಿನ ವಾಸ್ತುಶಿಲ್ಪವನ್ನು ನವೀಕರಿಸುವ ಮತ್ತು ಉದ್ಯಾನವನವನ್ನು ಉನ್ನತ ದರ್ಜೆಗೆ ಏರಿಸಿ, ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಉದ್ದೇಶದಿಂದ 25 ಕೋಟಿ ರು. ಅನುದಾನ ನೀಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರು. ಅನುದಾನ ಬಜೆಟ್ಟಿನಲ್ಲಿ ನೀಡಲಾಗಿದೆ.

ಹಾಗೆಯೆ, ಕರ್ನಾಟಕದ ಕರಾವಳಿಯ ಅತ್ಯಂತ ಜನಪ್ರಿಯ ಕ್ರೀಡೆ ಕಂಬಳವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ, ಆ ಆಚರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಾಖಲಿಸಲು ನಿರ್ಧರಿಸಲಾಗಿದ್ದು, ಆಚರಣೆಗಾಗಿ 1 ಕೋಟಿ ರು. ಮೊತ್ತವನ್ನು ಸದಾನಂದ ಗೌಡರು ಬಜೆಟ್ಟಿನಲ್ಲಿ ಒದಗಿಸಿದ್ದಾರೆ.

English summary
DV Sadananda Gowda has said it is compulsory to hoist Kannada flag on November 1, Kannada Rajyotsava on govt offices, schools and collages. DVS presented his first budget on March 21, 2012 after he became Chief Minister of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X