ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಚಂದ್ರ ಬಣಕ್ಕೆ ಯಡ್ಡಿ ಬಣದಿಂದ ಬೆದರಿಕೆ ಕರೆ

By Mahesh
|
Google Oneindia Kannada News

Balachandra Jarkiholi
ಹೊಸಪೇಟೆ, ಮಾ.20: ಮುಖ್ಯಮಂತ್ರಿ ಸ್ಥಾನವನ್ನು ಅನಗತ್ಯವಾಗಿ ಅಲುಗಾಡಿಸಲು ಬಯಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. 20 ಜನ ಶಾಸಕರು ರಾಜೀನಾಮೆ ನೀಡಲು ರೆಡಿ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಘೋಷಿಸಿದ ಬೆನ್ನಲ್ಲೆ ತೊಂದರೆಗಳು ಕಾಣಿಸಿಕೊಂಡಿದೆ.

ರೆಸಾರ್ಟ್ ರಾಜಕೀಯ ನಡೆಸುತ್ತಿರುವ ಸಚಿವರೊಬ್ಬರು ಬಾಲಚಂದ್ರ ಜಾರಕಿಹೊಳಿ ಬಣದ ಶಾಸಕರುಗಳ ಮೊಬೈಲ್ ಗಳಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಹೇಳಿದ್ದಾರೆ.

ಸ್ಥಳೀಯ ವೈಕುಂಠ ಅತಿಥಿ ಗೃಹದಲ್ಲಿರುವ ಡಾ.ಸಾರ್ವಭೌಮ ಬಗಲಿ, ಎಸ್.ಕೆ.ಬೆಳ್ಳುಬ್ಬಿ ಮತ್ತು ರಾಜು ಕಾಗೆ ಅವರ ಜತೆ ಯಡಿಯೂರಪ್ಪ ಬಣ ನಿರಂತರ ಮಾತುಕತೆ ನಡೆಸುತ್ತಿದೆ. ಆಮಿಷಗಳನ್ನು ಒಡ್ಡುತ್ತಿದ್ದಾರೆ. ಒಪ್ಪದ ಶಾಸಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಬೆಂಬಲ ನೀಡುವುದಿಲ್ಲ. ನಮ್ಮ ಸಂಗಡ ಬರದಿದ್ದರೆ ನಿಮ್ಮ ರಾಜಕೀಯ ಜೀವನ ಅಂತ್ಯಗೊಳಿಸುತ್ತೇವೆ ಎಂದು ಸಚಿವರು ಬೆದರಿಕೆ ಒಡ್ಡಿದ್ದಾರೆ. ನನ್ನ ಬಳಿ ದಾಖಲೆಗಳಿದೆ. ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಸಾಧ್ಯವಿಲ್ಲ. ಸದಾನಂದ ಗೌಡರು ಬಜೆಟ್ ಮಂಡಿಸಲಿ ನಂತರ, ರಾಜೀನಾಮೆ ನಿರ್ಧಾರಕ್ಕೆ ನಮ್ಮ ಶಾಸಕರು ಬದ್ಧ ಎಂದು ಸಚಿವ ಬಾಲಚಂದ್ರ ಹೇಳಿದ್ದಾರೆ.

English summary
Minister Balachandra Jarkiholi has alleges Yeddyurappa aide Ministers are making extortion call to BJP MLAs and also offering some post in the new cabinet if Yeddyurappa becomes CM again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X