• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಸಾರ್ಟಿನಲ್ಲೆ ಆಚಾರ್ಯರಿಗೆ ಯಡಿಯೂರಪ್ಪ ಸಂತಾಪ!

By Srinath
|

ಗೋಲ್ಡನ್ ಪಾಮ್ ರೆಸಾರ್ಟ್ -ಬೆಂಗಳೂರು, ಮಾ.20: ದಾಯಾದಿಗಳಂತೆ ಕಿತ್ತಾಡುತ್ತಿರುವ ಆಡಳಿತಾರೂಢ ಬಿಜೆಪಿ ನಾಯಕರ ಕಿತ್ತಾಟ ಮಂಗಳವಾರ ಹೊಸ ಮಜಲು ತಲುಪಿದೆ. ಮನೆಯ ಹಿರಿಯ ಯಜಮಾನ ಸತ್ತಿದ್ದರೆ ಆತನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲೂ ಪರಸ್ಪರ ವಿಮುಖವಾಗಿಯೇ ಉಳಿದಿದ್ದಾರೆ.

ಏನಾಯಿತೆಂದರೆ ಪಕ್ಷದ ಹೈಕಮಾಂಡ್ ಆದೇಶದಂತೆ ಬಜೆಟ್ ಅಧಿವೇಶನ ಮಂಗಳವಾರ ಅಬಾಧಿತವಾಗಿ ಆರಂಭವಾಗಿದೆ. ಅಧಿವೇಶನದ ಮೊದಲ ದಿನ ರೂಢಿಯಂತೆ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಅದರಂತೆ ಇತ್ತೀಚೆಗೆ ನಿಧನರಾದ ವಿಎಸ್ ಆಚಾರ್ಯರಿಗೆ ಇಂದು ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ವೇಳೆ ಆಡಳಿತಾರೂಢ ಸದಸ್ಯರ ಪೈಕಿ ಕೇವಲ 34 ಮಂದಿ ಸದನದಲ್ಲಿ ಹಾಜರಿದ್ದರು.

ಗಮನಾರ್ಹವೆಂದರೆ ಸೂಕ್ತ ಸ್ಥಾನಮಾನ ಸಿಗಲಿಲ್ಲವೆಂದು ಸೆಟೆದುಕೊಂಡಿರುವ ಯಡಿಯೂರಪ್ಪ ಪಟಾಲಂ ಶಿಸ್ತಾಗಿ ತಾವು ಉಳಿದುಕೊಂಡಿರುವ ಗೋಲ್ಡನ್ ಪಾಮ್ ರೆಸಾರ್ಟಿನಲ್ಲೇ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಧನ್ಯರಾದರು. ಆ ಮೂಲಕ ಹೊಸ ಸಂಪ್ರದಾಯದಕ್ಕೂ ನಾಂದಿ ಹಾಡಿದರು. ಈ ಮಧ್ಯೆ, ಯಡಿಯೂರಪ್ಪನವರ 'ವರದಿಗಾರರಾಗಿ' ಉದಾಸಿ ಮತ್ತು ಜಗದೀಶ್ ಶೆಟ್ಟರ್ ಅಧಿನೇಶನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಯಡಿಯೂರಪ್ಪ ಬಣದಿಂದ ಮತ್ಯಾರೂ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP battle Team BS Yeddyurappa condole death of VS Acharya in Resort. Where as only 34 members of ruling BJP take part in Budget session today (Mar 20)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more