ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸೆಂಬ್ಲಿಯಲ್ಲಿ ಬ್ಲೂ ಫಿಲಂ ನೋಡಿದವರ ಹೆಸರು ಲೀಕ್

|
Google Oneindia Kannada News

Porn scandal in Karnataka Assembly
ಬೆಂಗಳೂರು, ಮಾ 20: ಸದನದಲ್ಲಿ ನೀಲಿ ಸಿನಿಮಾ ವೀಕ್ಷಣೆಗೆ ಸಂಬಂಧಿಸಿದ ಸದನದ ವಿಚಾರಣಾ ಸಮಿತಿ ಸೋಮವಾರ ( ಮಾ 19) ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ವರದಿ ಸಲ್ಲಿಸಿದೆ. ಮಾಜಿ ಸಚಿವ ಲಕ್ಷ್ಮಣ ಸವದಿ ಅವರನ್ನು ತಪ್ಪಿತಸ್ಥರೆಂದು ಹೆಸರಿಸಲಾಗಿದೆ ಎಂಬ ಮಾಹಿತಿ 'ಲೀಕ್ ' ಆಗಿದೆ.

ಇನ್ನಿಬ್ಬರು ಸಚಿವರುಗಳಾದ ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರ ವಿರುದ್ಧದ ಆರೋಪ ಸಾಬೀತುಪಡಿಸಬಲ್ಲ ಸಾಕ್ಷ್ಯಾಧಾರಗಳಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಬರೆದಿದೆ ಎಂದು ಹೇಳಲಾಗಿದೆ.

ಶ್ರೀಶೈಲಪ್ಪ ಬಿದರೂರು ನೇತೃತ್ವದ ಸಮಿತಿ ಲಕ್ಷ್ಮಣ್ ಸವದಿ ಅವರನ್ನು ಸದನಕ್ಕೆ ಕರೆಸಿ ಎಚ್ಚರಿಕೆ ನೀಡುವಂತೆ ಕೂಡಾ ಶಿಫಾರಸು ಮಾಡಿದೆ. ಸ್ಪೀಕರ್ ಅವರು ನೀಡಿದ್ದ ಆದೇಶದ ಅನ್ವಯ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದೇವೆ. 38 ಪುಟಗಳ ವರದಿ ಮತ್ತು ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದೇವೆ. ಯಾವುದೇ ಪಕ್ಷಪಾತವಿಲ್ಲದೆ ವರದಿ ಸಿದ್ಧಪಡಿಸಿ ಸ್ಪೀಕರ್ ಅವರಿಗೆ ಸಲ್ಲಿಸಿದ್ದೇವೆ ಎಂದು ಶ್ರೀಶೈಲಪ್ಪ ಸುದ್ದಿಗಾರರಿಗೆ ತಿಳಿಸಿದರು.

ಇದೇ ಪ್ರಕರಣದಲ್ಲಿ ಸಿಲುಕಿದ್ದ ಮಾಜಿ ಸಚಿವರಾದ ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ವಿರುದ್ಧ ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ. ಈ ಇಬ್ಬರಿಗೆ ಸಂಬಂಧಿಸಿದಂತೆ ಮುಂದಿನ ತೀರ್ಮಾನ ಕೈಗೊಳ್ಳುವುದನ್ನು ಸ್ಪೀಕರ್ ವಿವೇಚನೆಗೆ ಬಿಟ್ಟಿರುವುದಾಗಿ ಸಮಿತಿ ಅಭಿಪ್ರಾಯಪಟ್ಟಿದೆ.

ಸಮಿತಿ ಮಾಡಿದ ಶಿಫಾರಸು

* ಕೆಲ ಮಾಧ್ಯಮಗಳು ಸದನದಲ್ಲಿ ನಡೆದ ಘಟನೆಗೆ ತಳುಕು ಹಾಕಿ ಇತರೆ ದೃಶ್ಯಗಳನ್ನೂ ಸೇರಿಸಿ ವರ್ಣರಂಜಿತವಾಗಿ ಪ್ರಸಾರ ಮಾಡಿವೆ. ಇಂತಹ ಘಟನೆಗಳು ನಡೆಯದಂತೆ ಕಡಿವಾಣ ಹಾಕಬೇಕು.
* ಸದನದ ಕಲಾಪಗಳ ನೇರ ಪ್ರಸಾರಕ್ಕೆ ಮಾಧ್ಯಮಗಳಿಗೆ ಅವಕಾಶ ನೀಡಬೇಕು.
* ಸದನದ ಕಲಾಪಕ್ಕೆ ಹೊರತಾದ ಇತರೆ ವಿಷಯಗಳಿಗೆ ಸಂಬಂಧಿಸಿದ ವರದಿ, ಕಾರ್ಯಕ್ರಮ ಪ್ರಸಾರ ಮಾಡುವ ಮುನ್ನ ಸ್ಪೀಕರ್ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು
* ಸದನದ ಒಳಗೆ ಮೊಬೈಲ್ ತರುವುದು ಮತ್ತು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು.
* ದಿನಪತ್ರಿಕೆಗಳು ಸೇರಿದಂತೆ ಯಾವುದೇ ಪತ್ರಿಕೆಗಳನ್ನು ಸ್ಪೀಕರ್ ಅನುಮತಿ ಇಲ್ಲದೇ ಸದನದ ಒಳಕ್ಕೆ ತರುವಂತಿಲ್ಲ.

English summary
The Legislature Committee, headed by Srishailappa Biradur, which was constituted to probe the conduct of the former Ministers Laxman Savadi, Krishna Palemar and C.C. Patil for allegedly watching porn clippings on their mobiles while the Assembly was in session, submitted its report to Speaker K.G. Bopaiah on Monday. A day before the budget session is to commence. According to sources, the committee has recommended in its report that the Speaker can summon Mr. Savadi and warn him not to repeat such acts when the House is in session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X