ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾ 'ಸಿಎಂ' ಪೀಠ ಮುಟ್ಟಿದರೆ ಹುಷಾರ್ : ಜಾರಕಿಹೊಳಿ

By Mahesh
|
Google Oneindia Kannada News

Balachandra Jarkiholi
ಬೆಂಗಳೂರು, ಮಾ.18: 'ಬಿಜೆಪಿ ವರಿಷ್ಠರೇ ಸದಾನಂದ ಗೌಡರ ಹೆಸರು ಸೂಚಿಸಿರುವಾಗ ಬೇರೊಬ್ಬರು ಬಜೆಟ್ ಮಂಡಿಸುವುದು ಸರಿಯಲ್ಲ. ಬಿಜೆಪಿ ಶಾಸಕರಿಂದ ಸಾಂವಿಧಾನಿಕ ಬಿಕ್ಕಟ್ಟು ಬೇಡ. ಮುಖ್ಯಮಂತ್ರಿ ಸ್ಥಾನವನ್ನು ಅನಗತ್ಯವಾಗಿ ಅಲುಗಾಡಿಸಲು ಬಯಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

ಯಡಿಯೂರಪ್ಪ ಅವರ ಕಿರುಕುಳ ಸಹಿಸೋದು ಅಸಾಧ್ಯ. ಬಜೆಟ್ ಅಧಿವೇಶನದ ನಂತರ ವಿಧಾನಸಭೆ ವಿಸರ್ಜಿಸುವುದು ಒಳಿತು. ನಾವು 20 ಜನ ಶಾಸಕರು ರಾಜೀನಾಮೆ ಸಲ್ಲಿಸಲು ತಯಾರಿದ್ದೇವೆ. ಆದ್ರೆ ಬಿಜೆಪಿ ಬಿಡುವುದಿಲ್ಲ. ಸದಾನಂದ ಗೌಡ, ಈಶ್ವರಪ್ಪ, ಅನಂತ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ನಡೆ ಇಡುತ್ತೇವೆ ಎಂದು ಜಾರಕಿಹೊಳಿ ಹೇಳಿದರು.

ಈ ಮಧ್ಯೆ ಬಿಜೆಪಿ ಬಿಕ್ಕಟ್ಟಿನ ಹೊಸ ತಿರುವಿನ ಬಗ್ಗೆ ಪ್ರತಿಕ್ರಿಯಿಸಿರುವ ಡಿಬಿ ಚಂದ್ರೇಗೌಡ, 'ಬಿಜೆಪಿ ಶಾಸಕರು ಆತುರದ ನಿರ್ಧಾರ ಕೈಗೊಂಡು ಸಾಂವಿಧಾನಿಕ ಬಿಕ್ಕಟ್ಟು ನಿರ್ಮಾಣ ಮಾಡುವುದು ಸರಿಯಲ್ಲ. ಸದಾನಂದ ಗೌಡರು ಬಜೆಟ್ ಮಂಡಿಸುವುದು ಸೂಕ್ತ' ಎಂದಿದ್ದಾರೆ.

English summary
Minister of Muncipal Administration Balachandra Jarakiholli has backed CM Dv Sadananda to table the Karnataka Budget 22012-13. Yeddyurappa followers should not indulged activities which cause rift in BJP said Jarakiholi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X