ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ರಾಧಿಕಾ ತವರಿನಲ್ಲಿ ಕುಮಾರಸ್ವಾಮಿ ನಾಗಮಂಡಲ

By Srinath
|
Google Oneindia Kannada News

radhika-hdk-perform-nagamandala-paltaje-mangalore
ಮಂಗಳೂರು, ಮಾ. 14: ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ದಂಪತಿ, ತಮ್ಮ ಪುತ್ರಿ ಶಮಿಕಾ ಜತೆಗೂಡಿ ನಾಗಮಂಡಲ ಸೇವೆಯನ್ನು ಸಾಂಗೋಪಾಂಗವಾಗಿ ನೆರವೇರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕುಮಾರಸ್ವಾಮಿ ಇದೇ ರೀತಿ ಇಲ್ಲಿ ನಡೆದ ನಾಗಮಂಡಲದಲ್ಲಿ ಭಾಗಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರ ತವರೂರಾದ ಬಂಟ್ವಾಳ ತಾಲೂಕು ವಾಲ್ತಾಜೆಯ ಸಾಲೆತ್ತೂರಿನಲ್ಲಿ ದಂಪತಿಯು ಮಂಗಳವಾರ ರಾತ್ರಿ ತಮ್ಮ ಈ ಹರಕೆಯನ್ನು ತೀರಿಸಿದರು. 'ನಾಗಮಂಡಲ ವೈಭವೋತ್ಸವ' ಹೆಸರಿನಲ್ಲಿ ರಾಧಿಕಾರ ತಂದೆ ದೇವರಾಜ್ ಹಾಗೂ ಮಕ್ಕಳೂ ಇದರಲ್ಲಿ ಪಾಲ್ಗೊಂಡಿದ್ದರು. ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರರು ಹಾಜರಿದ್ದರು.

ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ಹಾಗೂ ಕೃಷ್ಣ ಪ್ರಸಾದ್ ವೈದ್ಯ ನೇತೃತ್ವದಲ್ಲಿ ರಾತ್ರಿ 9ರ ಬಳಿಕ ಹಾಲಿಟ್ಟು ಸೇವೆ, ನಾಗದರ್ಶನ ಆರಂಭವಾಯಿತು. ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಪ್ರಚಾರ ನಿಮಿತ್ತ ಕುಂದಾಪುರದಲ್ಲಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾತ್ರಿ 11 ಗಂಟೆಗೆ ನಾಗಮಂಡಲ ನಡೆಯುವ ಸ್ಥಳಕ್ಕೆ ತಲುಪಿದರು. ಮಾರ್ಚ್ 31ಕ್ಕೆ ಇಲ್ಲಿ ದೈವಗಳ ನೇಮೋತ್ಸವ ನಡೆಯಲಿದೆ.

English summary
Karnataka JDS state president HD Kumaraswamy along with actress Radhika Kumaraswamy and daughter Shamika performed Nagamandala on Mar 13th night, a quaint ritual prevalent mainly in coastal Karnataka region (Dakshina Kannada District and Udupi District). It is an all-night ritual performed as a worship to the serpent god.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X