ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಂಜಿಯಿಂದ 1530 ಕೋಟಿ ಮೌಲ್ಯದ ಷೇರು ದಾನ

By Mahesh
|
Google Oneindia Kannada News

Azim Premji
ಬೆಂಗಳೂರು, ಮಾ.13: ವಿಪ್ರೋ ಸಂಸ್ಥೆ ಕೋಟ್ಯಾಧಿಪತಿ ಅಜೀಂ ಪ್ರೇಂಜಿ ನಿಯಂತ್ರಣದಲ್ಲಿರುವ ಸುಮಾರು 35 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಲಾಗುವುದು ಎಂದು ವಿಪ್ರೋ ಸಂಸ್ಥೆ ಷೇರು ಮಾರುಕಟ್ಟೆಗೆ ಮಂಗಳವಾರ(ಮಾ.13) ತಿಳಿಸಿದೆ.

ವಿಪ್ರೋ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಅಜೀಂ ಪ್ರೇಂಜಿ ಟ್ರಸ್ಟ್ ಹೊಂದಿರುವ 35 ಮಿಲಿಯನ್ ಷೇರು (10 ಲಕ್ಷ = 1 ಮಿಲಿಯನ್) ಅಥವಾ ಶೇ 1.4ರಷ್ಟು ಪ್ರಮಾಣವನ್ನು ಹರಾಜು ಹಾಕಿ, ಶಿಕ್ಷಣ ಯೋಜನೆಗೆ ಬಳಸಲಾಗುವುದು ಎಂದು ಸಂಸ್ಥೆ ಹೇಳಿದೆ.

ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿಯಲ್ಲಿ ಅಜೀಂ ಪ್ರೇಂಜಿ ಕುಟುಂಬ ಶೇ 79ರಷ್ಟು ಷೇರುಗಳನ್ನು ಹೊಂದಿದೆ. 35 ಮಿಲಿಯನ್ ಷೇರುಗಳ ಮೌಲ್ಯ ಸುಮಾರು 1,532 ಕೋಟಿ ರು ಎಂದು ಅಂದಾಜಿಸಲಾಗಿದೆ.

ವಿಪ್ರೋ ಚೇರ್ ಮನ್ ಪ್ರೇಂಜಿ ಅವರು ವನಸ್ಪತಿ ಖಾದ್ಯ ತೈಲ ವ್ಯಾಪಾರದಿಂದ ಹೈಡ್ರಾಲಿಕ್ಸ್ ಸಿಲಿಂಡರ್ಸ್ ಉದ್ಯಮಕ್ಕೆ ಇಳಿದು 80 ರ ದಶಕದಲ್ಲಿ ಸಾಫ್ಟ್ ವೇರ್ ಲೋಕಕ್ಕೆ ಕಾಲಿರಿಸಿದರು. ಆಜೀಂ ಪ್ರೇಂಜಿ ಶಿಕ್ಷಣ ಟ್ರಸ್ಟ್ ಲಾಭ ನಿರೀಕ್ಷಿಸದ ಸರ್ಕಾರೇತರ ಸಂಸ್ಥೆ ಆಗಿದೆ.

English summary
Foundation the Azim Premji Trust had informed the stock exchanges on Monday that it proposes to sell up to 35 million shares of Wipro Limited held by it following the Offer For Sale process prescribed by SEBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X