ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಸುದ್ದಿ : ಮಾಶೇಬಲ್ ಖರೀದಿಗೆ ಮುಂದಾದ ಸಿಎನ್ಎನ್

By Prasad
|
Google Oneindia Kannada News

Pete Cashmore, Mashable founder
ಅಟ್ಲಾಂಟಾ, ಮಾ. 12 : ಡಿಜಿಟಲ್ ಸಂಸ್ಕೃತಿ, ಸೋಷಿಯಲ್ ಮೀಡಿಯಾ ಮತ್ತು ತಂತ್ರಜ್ಞಾನ ಸುದ್ದಿಗಳ ಬಿತ್ತರಕ್ಕಾಗಿ ಮುಡಿಪಾಗಿರುವ ಅತಿ ದೊಡ್ಡ ಸಾಮಾಜಿಕ ಜಾಲ ತಾಣ ಮಾಶೇಬಲ್ ಅನ್ನು ಮೀಡಿಯಾ ದೈತ್ಯ ಕೇಬಲ್ ನ್ಯೂಸ್ ನೆಟ್ವರ್ಕ್ (ಸಿಎನ್ಎನ್) ಕಂಪನಿ 200 ಮಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಲು ಮುಂದಾಗಿದೆ ಎಂಬ ಗಾಳಿಸುದ್ದಿ ಎಲ್ಲೆಡೆ ಹಾರಾಡುತ್ತಿದೆ.

ರಾಯ್ಟರ್ ಬ್ಲಾಗರ್ ಫೆಲಿಕ್ಸ್ ಸಾಲ್ಮನ್ ಪ್ರಕಾರ, ಮಂಗಳವಾರ ಈ ಮಂಗಳಕರ ಸುದ್ದಿ ಅಧಿಕೃತವಾಗಿ ಹೊರಬೀಳಲಿದೆ. ಆದರೆ ಈ ಸುದ್ದಿಯನ್ನು ದೃಢೀಕರಿಸಲು ಮಾಶೇಬಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ನಿಜವಾದರೆ ಇಂಟರ್ನೆಟ್‌ನಲ್ಲಿ ಭಾರೀ ಅಲೆ ಎಬ್ಬಿಸಲಿದೆ ಎಂದು ಫೆಲಿಕ್ಸ್ ಹೇಳಿದ್ದಾರೆ.

2005ರಲ್ಲಿ ಪೀಟ್ ಕ್ಯಾಶ್ಮೋರ್ (26) ಅವರು ಮಾಶೇಬಲ್ ತಾಣವನ್ನು ಸ್ಕಾಟ್ಲಂಡ್‌ನ ಅಬ್ರದೀನ್‌ನಲ್ಲಿರುವ ಮನೆಯಿಂದಲೇ ಪ್ರಾರಂಭಿಸಿದ್ದನ್ನು ಗಣನೆಗೆ ತೆಗೆದುಕೊಂಡರೆ ಈ ಡೀಲ್ ಅಗಾಧವಾದದ್ದೆ. ಕಂಪನಿ ಕೂಡ ಅಗಾಧವಾಗಿ ಬೆಳೆದಿದ್ದು ಅನೇಕ ಬರಹಗಾರರು ಇದಕ್ಕೆ ಜೀವ ತುಂಬುತ್ತಿದ್ದಾರೆ. ತಿಂಗಳಿಗೆ 50 ಲಕ್ಷಕ್ಕೂ ಹೆಚ್ಚಿನ ಪೇಜ್ ವ್ಯೂ (page view) ಅನ್ನು ಮಾಶೇಬಲ್ ಹೊಂದಿದೆ. ಕ್ಯಾಶ್ಮೋರ್ ಅವರ ಟ್ವಿಟ್ಟರ್ ಖಾತೆ ಅತಿ ಹೆಚ್ಚು ಹಿಂಬಾಲಕರನ್ನು (27 ಲಕ್ಷ) ಹೊಂದಿರುವ ತಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

26 ವರ್ಷದ ಪೀಟ್ ಕ್ಯಾಶ್ಮೋರ್ ಅವರು ಕಳೆದ ವರ್ಷ ವರ್ಲ್ಡ್ ಎಕಾನಾಮಿಕ್ ಫೋರಂ ನೀಡುವ 'ಯುವ ಜಾಗತಿಕ ನಾಯಕ' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಮಾಶೇಬಲ್ ವೆಬ್ ತಾಣ ಪ್ರತಿವರ್ಷ ಸಾಮಾಜಿಕ ಜಾಲ ತಾಣದಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಜಾಗತಿಕ ನಾಯಕರುಗಳನ್ನು ಗುರುತಿಸಿ ಪ್ರಶಸ್ತಿ ಕೂಡ ನೀಡುತ್ತಿದೆ.

English summary
It is rumored that media giant Cable News Network (CNN) is all set to buy Mashable, biggest social networking website for a hopping 200 million dollars. Mashable is founded by Pete Cashmore at home in 2005 in Scotland. Cashmore won the World Economic Forum’s Young Global Leaders award last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X