ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಾಲಯದಲ್ಲಿ ರೂಮ್ ಬುಕ್ಕಿಂಗ್ ಈಗ ಆನ್ ಲೈನ್

By Mahesh
|
Google Oneindia Kannada News

SRS mutt, Mantralayam
ರಾಯಚೂರು, ಮಾ.8: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳವರ ಭಕ್ತವರ್ಗದವರಿಗೆ ವಸತಿ ಸೌಲಭ್ಯ ಅನುಕೂಲಕ್ಕಾಗಿ ಮುಂಗಡ ರೂಮ್ ಬುಕ್ಕಿಂಗ್ ವ್ಯವಸ್ಥೆಯನ್ನು ಆನ್ ಲೈನ್ ಮೂಲಕ ನೀಡಲಾಗುತ್ತಿದೆ.

ಮಂತ್ರಾಲಯ ಮಠದ ಧಾರ್ಮಿಕ ಆಗುಹೋಗುಗಳನ್ನು ತಿಳಿಯಪಡಿಸುವ ಮಂತ್ರಾಲಯ ಮಠದ ವೆಬ್ ತಾಣದ ಮೂಲಕ ಮುಂಗಡವಾಗಿ 2 ರೂಮ್ ಗಳನ್ನು ಬುಕ್ ಮಾಡಬಹುದು. ಸದ್ಯಕ್ಕೆ ಇದು ಪ್ರಾಯೋಗಿಕ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ವೆಬ್ ವ್ಯವಸ್ಥಾಪಕ ರಘುನಂದನಾಚಾರ್ಯ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಶೀಘ್ರದಲ್ಲೇ ಹೊಸ ರೂಪದಲ್ಲಿ ಆನ್ ಲೈನ್ ಪೋರ್ಟಲ್ ಲೋಕಾರ್ಪಣೆಯಾಗುತ್ತಿದೆ.ಈಗ ತಾತ್ಕಾಲಿಕವಾದ ವ್ಯವಸ್ಥೆ ನೀಡಲಾಗಿದೆ. ಆಸಕ್ತರು ಈ ಕೊಂಡಿ ಬಳಸಿ ರೂಮ್ ಬುಕ್ ಮಾಡಬಹುದು.

ಇದರ ಜೊತೆಗೆ ಹಲವು ಭಾಷೆಗಳಲ್ಲಿ ಪಂಚಾಂಗವನ್ನು ಡೌನ್ ಲೋಡ್ ಮಡಿಕೊಳ್ಳಬಹುದು. ಭಕ್ತಾದಿಗಳ ಅನುಕೂಲಕ್ಕಾಗಿ ಏಕಾದಶಿ, ಹುಣ್ಣಿಮೆ, ಅಮಾವಸ್ಯೆ ಹಾಗೂ ರಾಯರ ಮಠದಲ್ಲಿ ಜರಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಲಾಗಿದೆ.

ರಾಯರ ಆರಾಧನೆ, ಯುಗಾದಿ ಪೂರ್ವ ತಯಾರಿ ಚಿತ್ರ ಸಂಗ್ರಹವನ್ನು ಸಹ ವೆಬ್ ತಾಣದಲ್ಲಿ ನೋಡಬಹುದು.

English summary
Online room booking at Mantralayam Matha is now open. Devottes can now visit SRS mutt website and book online Maximum of 2 rooms only can be booked through website. Pooja photos, pooja seva listing is also available in website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X