ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾ ಪ್ರತಿಮೆ ಉರುಳಿಸೊಲ್ಲ : ಅಖಿಲೇಶ್

By Mahesh
|
Google Oneindia Kannada News

Akhilesh yadav
ಲಖ್ನೋ, ಮಾ.7: ಮಾಯಾವತಿ ಪ್ರತಿಮೆಗಳಾಗಲಿ, ಬಿಎಸ್ಪಿ ಚಿನ್ಹೆ ಆನೆಗಳನ್ನಾಗಲಿ ಉರುಳಿಸೋಲ್ಲ ಎಂದು ಯುವ ನೇತಾರ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಯ ಸರ್ಕಸ್ ನಲ್ಲಿ ತೊಡಗಿರುವ ಅಖಿಲೇಶ್, ಆನೆಗಳ ಮೇಲೆ ಕೃಪೆ ತೋರಿದ್ದಾರೆ.

ಉತ್ತರಪ್ರದೇಶದಲ್ಲಿ ಮತ್ತೆ ಗೂಂಡಾರಾಜ್ಯ ಆರಂಭವಾಗಲಿದೆಯೇ? NHRM ಹಗರಣ ಕತೆ ಏನಾಗುತ್ತದೆ? ಎಂದು ಖಾಸಗಿ ವಾಹಿನಿಗಳು ಕೇಳಿದ ಪ್ರಶ್ನೆಗಳಿಗೆ ಅಖಿಲೇಶ್ ತಾಳ್ಮೆಯಿಂದ ಉತ್ತರಿಸಿದರು.

NHRM ಹಗರಣದ ತನಿಖೆ ಸಿಬಿಐ ಕೈಲಿದೆ ನಮ್ಮ ಕೈಲಾದ ಮಟ್ಟಿಗೆ ನಾವು ಮಾಡುತ್ತೀವಿ. ಚುನಾವಣೆ ಸಮಯದಲ್ಲಿ ಹೇಳಿದಂತೆ ಭ್ರಷ್ಟರು, ಗೂಂಡಾಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ರಾಜ್ಯದಲ್ಲಿ ಸ್ಥಳವಿಲ್ಲ. ಗೂಂಡಾರಾಜ್ಯ ಎಂಬ ಕಲ್ಪನೆ ಬದಲಾಗಲಿದೆ ಎಂದರು.

ಅಪ್ಪನಿಂದ ನೀವು ಕಲಿತ್ತಿದ್ದು ಏನು? ಎಂಬುದಕ್ಕೆ ಉತ್ತರಿಸಿದ ಅಖಿಲೇಶ್, ಅವರಿಗೆ ಉತ್ತರ ಪ್ರದೇಶದ ಗ್ರಾಮ ಗ್ರಾಮಗಳು ಗೊತ್ತು.. ಜನರ ಬಳಿಗೆ ಹೋಗಿ ಅವರ ಕಷ್ಟ ಸುಖ ವಿಚಾರಿಸುತ್ತಾರೆ ಇದು ಅವರಿಂದ ಕಲಿತ ಪಾಠ.

ನೀವು ಇಂಗ್ಲೀಷ್ ವಿರೋಧಿಯೇ?: ಉತ್ತರಪ್ರದೇಶದಲ್ಲಿ ಇಂಗ್ಲೀಷ್ ಗಿಂತ ಹಿಂದಿ ಹಾಗೂ ಉರ್ದು ಅವಶ್ಯಕತೆ ಹೆಚ್ಚಾಗಿದೆ. ಇಂಗ್ಲೀಷ್ ಹಾಗೂ ಕಂಪ್ಯೂಟರ್ ಜೀವನ ಸುಧಾರಣೆ ಅಗತ್ಯವಾಗಿದ್ದು, ಮಾತೃಭಾಷೆ ಜೀವನ ನಿರ್ವಹಣೆಗೆ ಅವಶ್ಯಕ ಎಂದು ಅಖಿಲೇಶ್ ಹೇಳಿದರು.

200 ಸೀಟುಗಳ ನಿರೀಕ್ಷೆ ಇತ್ತು. 224 ಸೀಟು ಗೆದ್ದಿರುವುದು ಖುಷಿಕೊಟ್ಟಿದೆ ಎಂದ ಅಖಿಲೇಶ್ ಮಾಧ್ಯಮದ ಜೊತೆ ರಾಜಕಾರಣಿಗಳು ನಿಮ್ಮಷ್ಟು ಬೆರೆಯುವ ಅವಶ್ಯಕತೆ ಇದೆಯೇ? ಎಂಬುದಕ್ಕೆ ಪರಸ್ಪರ ಗೌರವ ಇರುವವರು ವೃತ್ತಿಯನ್ನು ಮೀರಿದ ಬಾಂಧವ್ಯ ಹೊಂದಲು ಸಾಧ್ಯ ಎಂದರು.

ಕ್ರೀಡಾ ಪ್ರೇಮಿ ಅಖಿಲೇಶ್ : ಮ್ಯಾಚೆಂಸ್ಟರ್ ಯುನಿಟೆಡ್ ತಂಡದ ಅಭಿಮಾನಿಯಾದ ಅಖಿಲೇಶ್ ಪಂದ್ಯ ನೋಡೋದು ಬಿಡೋಕೆ ಸಾಧ್ಯವಿಲ್ಲ. ಆದರೆ, ಆಟಗಾರನಾಗಿ ಮೈದಾನಕ್ಕೆ ಇಳಿಯುವುದು ಕಷ್ಟವಾಗಬಹುದು ಎಂದರು.

English summary
Akhilesh Yadav. Speaking to a TV channel, very expensive statues of Mayawati and her party’s election symbol –the elephants will not be removed or broken as it used public money. Akhilesh a die hard football fan likes to change UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X