ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಧಿಕಾ ಮಹಾತ್ಮೆ: ಎಚ್ ಡಿಕೆ ಆಸ್ತಿ ತನಿಖೆಯಾಗಲಿ

By Srinath
|
Google Oneindia Kannada News

radhika-contribution-assess-hdk-assets-lokayukta
ಬೆಂಗಳೂರು, ಮಾ.5: ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಆಸ್ತಿ ತೂಕ ಇತ್ತೀಚೆಗೆ ಹೆಚ್ಚಾಗಿದೆ. ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ತಮ್ಮ ನುಡವಣ ವಿವಾಹ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದರಿಂದ ಅವರುಗಳ ಆಸ್ತಿ ತನಿಖೆಯಾಗಲಿ ಎಂದು ಟಿಜೆ ಅಬ್ರಹಾಂ ಎಂಬುವವರು ಲೋಕಾಯುಕ್ತ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

'ನಿಮಗೆ ಈಗಾಗಲೇ ಗೊತ್ತಿರುವಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸ್ತುತ ಸಂಸದರಾಗಿದ್ದಾರೆ. ಅವರು ಸಾರ್ವಜನಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ನಟಿ ರಾಧಿಕಾರನ್ನು ಮದುವೆಯಾಗಿದ್ದಾರೆ. ಇದರಿಂದ ರಾಧಿಕಾ, ಅವರ ಪುತ್ರಿ ಶಮಿಕಾ ಅವರ ಹೆಸರಿನಲ್ಲೂ ಆಸ್ತಿ ಜಮಾವಣೆಯಾಗಿದೆ. ಆದರೆ ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ. ಇದು ಕರ್ನಾಟಕ ಲೋಕಾಯುಕ್ತ ಕಾಯಿದೆ ಸೆಕ್ಷನ್ 22(1) ಅನುಸಾರ ಸಲ್ಲಿಸುವುದು ಕಡ್ಡಾಯ' ಎಂದು ಅಬ್ರಹಾಂ ಶನಿವಾರ ತಾವು ಸಲ್ಲಿಸಿದ ಅರ್ಜಿಯಲ್ಲಿ ಕೋರ್ಟ್ ಗಮನಸೆಳೆದಿದ್ದಾರೆ.

'ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಧಿಕಾರ ಆಸ್ತಿ ವಿಪರೀತ ಎನ್ನುವಷ್ಟು ವೃದ್ಧಿಯಾಗಿದೆ ಎಂಬುದು ನನ್ನ ಭಾವನೆ. ಆದ್ದರಿಂದ ಕಾನೂನು ಪ್ರಕಾರ ಸಾರ್ವಜನಿಕ ಸೇವೆಯಲ್ಲಿರುವವರು ತಮ್ಮ ಮತ್ತು ತಮ್ಮ ಕುಟುಂಬ ವರ್ಗದ ಆಸ್ತಿಯನ್ನು ಬಹಿರಂಗಗೊಳಿಸುವುದು ಅನಿವಾರ್ಯ. ಹೀಗಾಗಿ ರಾಧಿಕಾ ಮತ್ತು ಅವರ ಪುತ್ರಿಯ ಆಸ್ತಿ ವಿವರ ಕೋರ್ಟಿಗೆ ಸಲ್ಲಿಕೆಯಾಗಬೇಕು' ಎಂದು ಅಬ್ರಹಾಂ ಆಶಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಈಗಾಗಲೇ ಲೋಕಾಯುಕ್ತ ಕೋರ್ಟಿನಲ್ಲಿ ಕುಮಾರಸ್ವಾಮಿ ವಿರುದ್ಧ ತಾವು ದೂರು ದಾಖಲಿಸಿರುವುದರಿಂದ ಕುಮಾರಸ್ವಾಮಿ ಮತ್ರತು ಅವರ 'ಕುಟುಂಬವರ್ಗದ' ಆಸ್ತಿಪಾಸ್ತಿ ವಿವರ ತನಗೆ ಬೇಕಾಗುತ್ತದೆ ಎಂಬುದು ಅಬ್ರಹಾಂರ ಕೋರಿಕೆಯಾಗಿದೆ.

English summary
As Karnataka JDS state president HD Kumaraswamy has accepted Radhika Kumaraswamy as his wife, Activist TJ Abraham has filed a representation with the Lokayukta seeking an update on his assets and liabilities taking into account those held in the name of Radhika and her child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X