ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲ ಬೇಗೆ ತಣಿಸಲು ಬಂದಿದೆ ಲಖನೌ ಜ್ಯೂಸ್

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Lucknow juice to quench thirst of people
ಯಾದಗಿರಿ, ಮಾ. 5 : ಬೇಸಿಗೆ ಬಂತೆಂದರೆ ಯಾದಗಿರಿ, ರಾಯಚೂರು, ಗುಲಬರ್ಗಾದ ಹೆಸರು ಕೇಳಿದರೇ ಸಾಕು ತಲೆ ಗಿರಿಗಿರಿ ತಿರುಗಲು ಪ್ರಾರಂಭಿಸುತ್ತದೆ. ಇನ್ನು ಅಲ್ಲಿರುವವರ ಪಾಡೇನು? ಬಿಸಿಲಿನ ಬಗ್ಗೆ ಚಿಂತಿಸಿ ಮತ್ತಷ್ಟು ತಲೆಬಿಸಿ ಮಾಡಿಕೊಳ್ಳುವ ಕಾರಣವೇ ಇಲ್ಲ. ಯಾಕೆಂದರೆ, ಆ ಬೇಗೆಯನ್ನು ತಣಿಸಲು ಇಲ್ಲಿ ಸಿದ್ಧವಾಗಿ ನಿಂತಿದೆ ತಾಜಾತಾಜಾ ತಣ್ಣನೆಯ ಮೋಸಂಬಿ ಜ್ಯೂಸು.

ಇದರಲ್ಲೇನು ವಿಶೇಷ? ತಾಜಾ ಮೋಸಂಬಿ ಜ್ಯೂಸ್ ಯಾದಗಿರಿಯಲ್ಲಿ ಮಾತ್ರ ಸಿಗುತ್ತದಾ ಎಂದು ಕೇಳಬೇಡಿ. ಯಾಕೆಂದರೆ, ಜ್ಯೂಸ್ ಯಾವುದೆನ್ನುವುದಕ್ಕಿಂತ ಥಂಡಾ ಥಂಡಾ ಜ್ಯೂಸನ್ನು ಮಾರುವವರು ಲೋಕಲ್ ಜನ ಅಲ್ಲವೇ ಅಲ್ಲ. ಅವರು ಉತ್ತರ ಪ್ರದೇಶದವರು, ಮೂಲತಃ ಲಖನೌದವರು.

ಮತ್ತೊಂದು ವಿಶೇಷವೆಂದರೆ, ಅಲೆಮಾರಿಗಳು ಬೇಸಿಗೆಯಲ್ಲಿ ಮಾತ್ರ ಉತ್ತರ ಪ್ರದೇಶದಿಂದ ಯಾದಗಿರಿಗೆ ಬಂದು ಜನರ ಹೊಟ್ಟೆ ತಂಪು ಮಾಡಿ ತಿರುಗಿ ಹೋಗಿಬಿಡುತ್ತಾರೆ. ಮತ್ತೆ ಕಾಣಿಸಿಕೊಳ್ಳುವುದು ಮುಂದಿನ ಬೇಸಿಗೆಯಲ್ಲಿಯೇ. ಇಲ್ಲಿ ನಾಲ್ಕೈದು ತಿಂಗಳು ಇದ್ದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೆಲ್ಲ ಅಲೆದಾಡಿ ಹಣ್ಣಿನರಸ ಮಾರುತ್ತಾರೆ.

ಸುಮಾರು 38 ಡಿಗ್ರಿ ಸೆಲ್ಸಿಯಸ್‌ನಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೂ ಬಿಸಿಲು ಇರುತ್ತದೆ. ಈ ಉರಿ ಉರಿ ಬಿಸಿಲಿನಿಂದ ರಕ್ಷಣೆ ಪಡೆಯಲು ಶಾಲೆ ಮಕ್ಕಳು, ಹಿರಿಯುರು, ಕಿರಿಯರೆನ್ನದೇ ತಂಪಾದ ಮೋಸಬ್ಬಿ ಜ್ಯೂಸ್ ಕುಡಿಯಲು ಜ್ಯೂಸ್ ಅಂಗಡಿಗೆ ಮುಗಿಬೀಳುತ್ತಾರೆ.

ತಂಪಾದ ಜ್ಯೂಸ್ ತಯಾರಿಸಲು ಇವರು ಸಿತಾಪುರ್‌ನಿಂದ ಹಣ್ಣುಗಳನ್ನೇ ಬಳಸುತ್ತಾರೆ. ರಸ ಹಿಂಡಿ ಸಕ್ಕರೆ ಬೆರೆಸಿ, ಮೇಲೊಂದಿಷ್ಟು ಐಸ್ ತೇಲಾಡುವಂತೆ ಮಾಡಿ, ಸ್ವಲ್ಪವೇ ಸ್ವಲ್ಪ ಮಸಾಲೆ ಉದುರಿಸಿದರೆ ಸೂಪರ್ ಥಂಡಾ ಜ್ಯೂಸ್ ರೆಡಿ. ಬೆಲೆ 10ರಿಂದ 15 ರು. ಮಾತ್ರ. ನೆರೆ ರಾಜ್ಯಗಳ ಗಡಿ ಸಮಸ್ಯೆ ಹಾಗೂ ಭಾಷೆ ಸಮಸ್ಯೆ ಬಗ್ಗೆ ಗಲಾಟೆಗಳು ಸಂಭವಿಸುವ ಇಂದಿನ ದಿನಗಳಲ್ಲಿ, ಹೊರ ರಾಜ್ಯದಿಂದ ಬಂದು ಜನರ ಬಿಸಿಲ ತಾಪವನ್ನು ಇಂಗಿಸುವ ಈ ಉತ್ತರ ಪ್ರದೇಶದ ಯುವಕರ ಕೆಲಸ ನೀಜಕ್ಕೂ ಮೆಚ್ಚುವಂತಹದ್ದು.

English summary
Summer has set in with usual severity in North Karnataka, especially in Yadgir, Raichur, Gulbarga, Bagalkot districts. Not to worry. People from Uttar Pradesh come here during summer and sell Mosambi (sweet lemon) juice to quench the thirst of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X