ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆ ಬಳಿಕ ವರುಣ್ ಗೇಟ್ ಪಾಸ್

By Srinath
|
Google Oneindia Kannada News

up-varun-gandhi-may-be-ousted-from-bjp
ಫಿಲಿಬಿತ್, ಮಾ.3: ಈ ಹಿಂದೆ, 'ಹಿಂದೂಗಳ ವಿರುದ್ಧ ಯಾರೇ ಆಗಲಿ ಬೊಟ್ಟುಮಾಡಿ ತೋರಿಸಿದರೆ ಆ ಬೆಟ್ಟನ್ನೇ ಖಚಕ್ ಮಾಡ್ಬಿಡ್ತೇನೆ' ಎಂದು ಬಿಜೆಪಿ ಪರ ಗುಡುಗಿದ್ದ ಯುವಕನನ್ನು ಅದೇ ಪಕ್ಷ ಈಗ ಉತ್ತರಪ್ರದೇಶ ಚುನಾವಣೆ ಮುಗಿಯಲಿ, ಆತನಿಗೆ ಗೇಟ್ ಪಾಸ್ ನೀಡುತ್ತೇವೆ' ಎಂದು ಕುದಿಯುತ್ತಿದೆ. ಆತ ಬೇರ್ಯಾರು ಅಲ್ಲ ಫೈರ್ ಬ್ರ್ಯಾಂಡ್ ವರುಣ್ ಗಾಂಧಿ.

ಫಿಲಿಬಿತ್ ಕ್ಷೇತ್ರದ ಈ ಸಂಸದ ಉತ್ತರಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಪ್ರಚಾರ ವೇಳೆ ಏನ್ಮಾಡಿದ್ದಾರೆ ಅಂದ್ರೆ 'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅನುಮಾನ. ಏಕೆಂದರೆ ಪಕ್ಷ ಒಡೆದಿದೆ. 55 ಮುಖ್ಯಮಂತ್ರಿ ಅಭ್ಯರ್ಥಿಗಳು ಇಲ್ಲಿದ್ದಾರೆ' ಎಂದು ಬಹಿರಂಗವಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

'ವರುಣ್ ಗಾಂಧಿಯ ಈ ಹೇಳಿಕೆ ಖಂಡಿತ ಪಕ್ಷಕ್ಕೆ ನಷ್ಟವನ್ನುಂಟು ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಖಚಿತ. ಈ ಬಗ್ಗೆ ಉತ್ತರ ಪ್ರದೇಶ ಬಿಜೆಪಿ ನಾಯಕರು ಕೇಂದ್ರದ ವರಿಷ್ಠರ ಮೇಲೆ ಒತ್ತಡ ಹಾಕಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅವರು ಶಿಸ್ತು ಕ್ರಮಕ್ಕೆ ಒಳಗಾಗಲಿದ್ದಾರೆ' ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಂದಹಾಗೆ, ಸ್ವಕ್ಷೇತ್ರವಾದ ಫಿಲಿಬಿತ್ ಮತ್ತು ತಮ್ಮ ತಾಯಿ ಮೇನಕಾ ಗಾಂಧಿ ಪ್ರತಿನಿಧಿಸುವ ಆನ್ಲಾ ಸಂಸದೀಯ ಕ್ಷೇತ್ರ ವ್ಯಾಪ್ತಿಗಳಲ್ಲಿ ಮಾತ್ರ ವರುಣ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದರು.

English summary
BJP is considering stern action against its Pilibhit MP, Varun Gandhi, for his recent comments on its prospects in the UP elections. Varun had remarked last week that the BJP was spoilt for choice and had 55 chief ministerial candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X