ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯ ಸಿಗುವವರೆಗೆ ಪತ್ರಕರ್ತರ ಹೋರಾಟ ನಿಲ್ಲದು

By Prasad
|
Google Oneindia Kannada News

Vishweshwar Bhat, RT Vittal Murthy and others
ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸುತ್ತಿದ್ದಾಗ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನಲ್ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಕೂಡಿಕೊಂಡು, ಮುಖ್ಯಮಂತ್ರಿ ಜೊತೆ ಖಾಸಗಿ ಚಾನಲ್ ಮುಖಸ್ಥರು ನಡೆಸಿದ ಮಾತುಕತೆಯ ವಿವರವನ್ನು ವಿವರಿಸಿದರು. ಪತ್ರಕರ್ತರು ಧಿಕ್ಕಾರ ಕೂಗಿ ಮರಳಿ ಹೋಗುವಲ್ಲಿಗೆ ಪ್ರತಿಭಟನೆ ನಿಲ್ಲಬಾರದು. ನ್ಯಾಯ ಸಿಗುವವರೆಗೆ ಹೋರಾಟ ನಡೆಸಬೇಕು. ಪತ್ರಕರ್ತರೆಲ್ಲರೂ ಒಗ್ಗಟ್ಟಿನಿಂದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಟ್ ನುಡಿದರು.

ವಕೀಲರ ಪುಂಡಾಟಿಕೆಯಿಂದ ಪತ್ರಕರ್ತರು ನಿರ್ಭಿಡೆಯಿಂದ ವರದಿ ಮಾಡಲು ಸಾಧ್ಯವಾಗುತ್ತಿಲ್ಲ. ಪತ್ರಕರ್ತರು ಶಾಂತಿಪ್ರಿಯರು ಮತ್ತು ಸಹನೆಯಿಂದ ವರ್ತಿಸುವವರು. ಯಾವತ್ತೂ ಕಾನೂನನ್ನು ಕೈಗೆ ತೆಗೆದುಕೊಳ್ಳುವವರಲ್ಲ. ಮಾ.2ರಂದು ನಡೆದಂಥ ಭೀಕರ ಘಟನೆ ಹಿಂದೆಂದೂ ನಡೆದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಪತ್ರಕರ್ತರು ಧೈರ್ಯದಿಂದ ವರದಿ ಮಾಡುವಂತಹ ವಾತಾವರಣ ಸರಕಾರ ಕಲ್ಪಿಸಿಕೊಡಬೇಕು. ಅಂತಹ ವಾತಾವರಣ ಸೃಷ್ಟಿಯಾಗುವವರೆಗೆ ಕೋರ್ಟ್‌ಗೆ ಸಂಬಂಧಿಸಿದ ಯಾವುದೇ ವರದಿಗಾರಿಕೆ ನಾವು ಮಾಡಬಾರದು ಎಂದು ಘೋಷಿಸಿದರು.

ಈಗ ಸರಕಾರ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಈ ಘಟನೆಯ ಹಿಂದೆ ಸರಕಾರದ ಕೈವಾಡವಿದೆ ಎಂದು ಮೇಲುನೋಟಕ್ಕೆ ಸಾಬೀತಾಗುತ್ತದೆ. 5 ಕೋಟಿ ಕನ್ನಡಿಗರನ್ನು ರಕ್ಷಿಸುತ್ತಿರುವ ಪೊಲೀಸರ ರಕ್ಷಣೆಗೂ ಸರಕಾರ ಯತ್ನಿಸುತ್ತಿಲ್ಲ. ಪೊಲೀಸರಿಗೇ ಈ ದುರವಸ್ಥೆ ಬಂದರೆ ಇನ್ನು ಅವರನ್ನು ನಂಬಿ ಧೈರ್ಯದಿಂದ ಮುನ್ನುಗ್ಗುವ ಪತ್ರಕರ್ತರ ಪಾಡೇನು ಎಂಬ ಮಾತುಗಳು ಕೇಳಿಬಂದವು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಪಡೆ ಕಾವಲಿಗೆ ನಿಂತಿತ್ತು, ರಸ್ತೆ ಸಂಚಾರವೂ ಸುಗಮವಾಗಿ ಸಾಗುತ್ತಿತ್ತು.

ಪ್ರತಿಭಟನೆಯ ಮುಂದುವರಿದ ಕ್ರಮವಾಗಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಎದಿರು ವಕೀಲರ ಪ್ರತಿಕೃತಿ ದಹಿಸುವ ಕಾರ್ಯಕ್ರಮವನ್ನು ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದೆ. ಈ ನಡುವೆ, ಪತ್ರಿಕಾ ಕಚೇರಿ ಮೇಲೂ ದಾಳಿ ನಡೆಸಲು ವಕೀಲರು ಸಂಚು ಹೂಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತು. ಪತ್ರಿಕಾ ಕಚೇರಿ ಮೇಲೆ ದಾಳಿಗಳಾದರೆ ಅದಕ್ಕೂ ಸರಕಾರವೇ ಹೊಣೆಯಾಗುತ್ತದೆ ಎಂಬ ಎಚ್ಚರಿಕೆಯನ್ನು ಸರಕಾರಕ್ಕೆ ನೀಡಲಾಯಿತು.

English summary
All the journalists in Bangalore protested against attack by rowdy advocates on media and police on March 2nd at City Civil and Sessions Court complex. Journalists have demanded CBI inquiry instead of judicial inquiry into the matter. Scribes took out a small procession from Bangalore Press Club to Gandhi statue on MG Road and later submitted a memorandum to Governor to take quick action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X