ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಳವಿಕಾ ಮೇಡಂ ಜೆಡಿಎಸ್ ಸೇರಿದ್ದು ಏಕೆ?

By Mahesh
|
Google Oneindia Kannada News

Malavika
ಬೆಂಗಳೂರು, ಮಾ.2: ಕಳೆದ ಚುನಾವಣೆ ವೇಳೆಯಲ್ಲೇ ನಾನು ರಾಜಕೀಯ ಪ್ರವೇಶ ಬಯಸಿದ್ದೆ. ಆದರೆ, ನನ್ನ ಮಗ ಇನ್ನೂ ಚಿಕ್ಕವನಿದ್ದ. ಈಗ ನನ್ನ ಮಗನಿಗೆ ನಾಲ್ಕು ವರ್ಷ.ನನ್ನ ಪತಿ ಅವಿನಾಶ್ ಕೂಡಾ ನನ್ನ ನಿರ್ಧಾರವನ್ನು ತುಂಬಾ ಹೃದಯದಿಂದ ಸ್ವಾಗತಿಸಿದ್ದಾರೆ. ಆಪ್ತರೊಡನೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಾಳವಿಕಾ ಅವರು ಸುವರ್ಣ ಸುದ್ದಿ ವಾಹಿನಿ ಜೊತೆಗೆ ಮಾತನಾಡುತ್ತಾ ಹೇಳಿದರು.

ಜೆಡಿಎಸ್ ಆಯ್ಕೆ ಮಾಡಿದ್ದು ಏಕೆ?:ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿದ್ದಾಗ ನನಗೆ ಮೂರು ಆಯ್ಕೆಗಳಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್. ಸೋನಿಯಾ ಗಾಂಧಿಯನ್ನು ನನ್ನ ನಾಯಕಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ರಿಜೆಕ್ಟ್ ಮಾಡಿದೆ. ನಾನೊಬ್ಬ ಹಿಂದೂ ಆಗಿರುವುದರಿಂದ ಬಿಜೆಪಿ ಕಡೆ ಒಲವು ತೋರಬಹುದಿತ್ತು. ಆದರೆ, ಸಂಘ ಪರಿವಾರದ ಹಿನ್ನೆಲೆಯಲ್ಲಿ ಬಿಜೆಪಿ ಸೇರಲು ಮನಸ್ಸಾಗಲಿಲ್ಲ.

ಜೆಡಿಎಸ್ ಪಕ್ಷದಲ್ಲಿ ಸಮಾಜವಾದಿ ಚಿಂತನೆ ಹಿನ್ನೆಲೆಯಿರುವುದರಿಂದ ಜೆಡಿಎಸ್ ಪಕ್ಷ ಸೇರಿದೆ. ಹಳ್ಳಿ ರೈತನ ಮಗ ದೇಶದ ಪ್ರಧಾನಿಯಾದರು ಎಂಬುದು ನಮಗೆ ಹೆಮ್ಮೆ ಸಂಗತಿ. ದೇವೇಗೌಡರ ಬಗ್ಗೆ ಅತಿಯಾದ ಗೌರವವಿದೆ.

ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಕೈಗೊಂಡ ನಿರ್ಣಯಗಳು ಮೆಚ್ಚುಗೆಯಾಗಿದೆ ಎಂದು ಮಾಳವಿಕಾ ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ ತಾರಾ, ಉಮಾಶ್ರೀ, ಇತ್ತೀಚಿನ ಪೂಜಾ ಗಾಂಧಿ ಸಾಲಿಗೆ ಮಾಳವಿಕಾ ಕೂಡಾ ಸೇರ್ಪಡೆಗೊಂಡಿದ್ದಾರೆ.

English summary
Actress Malavika Avinash set to join JDS officially today(Mar.2). JDS has socialistic values and iam taking politics as my next profession said Malavika. Why did Malavika choose JDS instead of BJP and Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X