ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆನೆ ಹೊತ್ತ ನಟಿ ಮಾಳವಿಕಾ, ಜೆಡಿಎಸ್ ಗೆ ಸೇರ್ಪಡೆ

By Mahesh
|
Google Oneindia Kannada News

Malavika
ಬೆಂಗಳೂರು, ಮಾ.2: ಖ್ಯಾತ ನಟಿ ಮಾಳವಿಕಾ ಅವಿನಾಶ್ ಅವರು ಜಾತ್ಯಾತೀತ ಜನತಾ ದಳ(ಜೆಡಿಎಸ್) ಸೇರಲಿದ್ದಾರೆ. ಸಮಾಜವಾದಿ ತತ್ತ್ವದಿಂದ ಬೆಳೆದು ಬಂದಿರುವ ಪಕ್ಷ, ಆದ್ದರಿಂದ ನಾನು ಜೆಡಿಎಸ್ ಸೇರುತ್ತಿದ್ದೇನೆ ಎಂದು ಖಾಸಗಿ ಸುದ್ದಿ ವಾಹಿನಿಗಳಿಗೆ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಬಸವನಗೌಡ ಪಾಟೀಲ್ ಯತ್ನಾಳ್ , ಬಸವರಾಜ್ ಹೊರಟ್ಟಿ ಸಮ್ಮುಖದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಮಾಳವಿಕಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ.

ರಾಜಕೀಯದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಆಸಕ್ತಿಯಿತ್ತು. ಕಾನೂನು ಶಿಕ್ಷಣ ಪಡೆಯುವಾಗ ಈ ಆಸಕ್ತಿ ಇನ್ನಷ್ಟು ಬೆಳೆಯಿತು. ರಾಜಕೀಯವನ್ನು ವೃತ್ತಿಯಾಗಿ ಸ್ವೀಕರಿಸುತ್ತಿದ್ದೇನೆ. ಅಭಿನಯ ಕ್ಷೇತ್ರದಲ್ಲಿ ನನ್ನ ಗುರು ಟಿ.ಎನ್ ಸೀತಾರಾಂ ಅವರಿಂದ ಸಮಾಜವಾದದ ಪಾಠ ಕಲಿತಿದ್ದೇನೆ. ಅವರ ಅನುಮತಿ ಪಡೆದೇ ರಾಜಕೀಯಕ್ಕೆ ಇಳಿಯುತ್ತಿದ್ದೆನೆ ಎಂದು ಮಾಳವಿಕಾ ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಿನಿಮಾ ನಟ, ನಟಿಯರು ರಾಜಕೀಯ ಪಕ್ಷ ಸೇರುವುದು ಕಾಮನ್ ಆಗಿದೆ. ಈ ಸಂದರ್ಭದಲ್ಲಿ ನಟಿಯರು ಕೇವಲ ಪ್ರದರ್ಶನ ವಸ್ತುವಾಗಿ ಬಳಕೆಯಾಗುತ್ತಿದ್ದಾರೆ ಎಂಬ ಆರೋಪವಿದೆ. ಆದರೆ ನಾನು ವೃತ್ತಿಯಾಗಿ ಸ್ವೀಕರಿಸಿದ ಮೇಲೆ ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿದ್ದೇನೆ ಎಂದರು.

ಮಾಳವಿಕಾ ಜೆಡಿಎಸ್ ಪಕ್ಷವನ್ನು ಸೇರಿದ್ದು ಏಕೆ..? ಮುಂದೆ ಓದಿ...

English summary
Actress Malavika Avinash set to join JDS officially today(Mar.2). JDS has socialistic values and iam taking politics as my next profession said Malavika.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X