ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಐಸಿಯಿಂದ ಹೊಸ ಕೊಡುಗೆ - ಜೀವನ್ ವೃದ್ಧಿ

By Prasad
|
Google Oneindia Kannada News

LIC of India launches new product - Jeevan Vriddhi
ಮುಂಬೈ, ಮಾ. 01 : ಭಾರತೀಯ ಜೀವವಿಮಾ ನಿಗಮ ಗುರುವಾರ, ಮಾ.1ರಂದು 'ಜೀವನ್ ವೃದ್ಧಿ' ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ. ಒಂದೇ ಬಾರಿ ಕಟ್ಟುವ ಮೊತ್ತದಿಂದ ಸಿಗುವ ಲಾಭ ಮಾತ್ರ ಐದು ಪಟ್ಟು.

ವಿಮೆಯ ಅವಧಿ ಮುಗಿದ ನಂತರ ಸಿಗುವ ಪ್ರತಿಫಲ ಖಚಿತ. ಈ ಕೊಡುಗೆ ಕೇವಲ 120 ದಿನ ಮಾತ್ರ ಲಭ್ಯವಾಗಿರುತ್ತದೆ. ಇನ್ಶೂರನ್ಸ್ ಮತ್ತು ರಿಟರ್ನ್ಸ್ ಸಮ್ಮಿಲನದ ಈ ಪ್ಲಾನ್ ನಿಂದ ಬಹುಮುಖಿ ಲಾಭಗಳಿವೆ. ಅವಗಳೆಂದರೆ,

ಭದ್ರತೆ : ರಿಸ್ಕ್ ಕವರ್ ಆಗಿ ಕಟ್ಟುವ ಒಂದೇ ಪ್ರೀಮಿಯಂನ ಐದು ಪಟ್ಟಿನಷ್ಟು ಮೊತ್ತವನ್ನು ನೀಡಲಾಗುತ್ತದೆ.
ಬೆಳವಣಿಗೆ : ಖಚಿತವಾಗಿ ದೊರೆಯುವ ಮೊತ್ತದ ಜೊತೆಗೆ ಇತರ ಆಕರ್ಷಕ ಕೊಡುಗೆಗಳೂ ಇರುತ್ತವೆ.
ಅನುಕೂಲ : ಪ್ರೀಮಿಯಂ ಕಟ್ಟಬೇಕಾಗಿರುವುದು ಒಂದು ಬಾರಿ.
ಸ್ವಾತಂತ್ರ್ಯ : ಅರ್ಹತೆ ಇದ್ದವರಿಗೆ ಇಷ್ಟೇ ಮೊತ್ತ ಕಟ್ಟಬೇಕೆಂಬ ಕಟ್ಟಳೆಯಿಲ್ಲ. ಯಾವುದೇ ಮೊತ್ತ ಕಟ್ಟಲು ಪಾಲಿಸಿದಾರರು ಸ್ವತಂತ್ರರು.
ಲಿಕ್ವಿಡಿಟಿ : ಯೋಜನೆ ಆರಂಭಿಸಿದ 1 ವರ್ಷದ ನಂತರ ಪಾಲಿಸಿ ಸಾಲ ದೊರೆಯುವುದು.

ಪಾಲಿಸಿ ಇನ್ನೂ ಜಾರಿಯಲ್ಲಿದ್ದಾಗಲೇ ಒಂದು ವೇಳೆ ಸಾವಿನಂತಹ ಅಹಿತಕರ ಘಟನೆ ಸಂಭವಿಸಿದರೆ, ಇತರ ಕೊಡುಗೆಗಳನ್ನು ಹೊರತುಪಡಿಸಿ, ವಿಮೆ ಮಾಡಿದ ಮೊತ್ತದ ಐದು ಪಟ್ಟು ಹಣ ಖಚಿತವಾಗಿ ಕೂಡಲೆ ದೊರೆಯುತ್ತದೆ. ಪಾಲಿಸಿ ಅವಧಿ ಮುಗಿದ ಮೇಲೆ, ಪಾಲಿಸಿಯ ಪ್ರೀಮಿಯಂ ಮತ್ತು ವಯಸ್ಸಿನ ಆಧಾರದ ಮೇಲೆ, ಆಶ್ವಾಸನೆ ನೀಡಲಾದ ಸಂಪೂರ್ಣ ಮೊತ್ತ ಪಾಲಿಸಿದಾರನಿಗೆ ಸಿಗುತ್ತದೆ. ಪಾಲಿಸಿ ಅವಧಿ ಮುಗಿಯಲು ಒಂದು ವರ್ಷವಿದ್ದಾಗ ಹೆಚ್ಚುವರಿ ಲಾಯಲ್ಟಿ ಮೊತ್ತದ ದರವನ್ನು ನಿಗಮ ನಿಗದಿಪಡಿಸುತ್ತದೆ.

8 ವರ್ಷ ಮೇಲ್ಪಟ್ಟವರು ಮತ್ತು 50 ವರ್ಷಕ್ಕಿಂತ ಕೆಳಗಿನ ವ್ಯಕ್ತಿ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅವಧಿಯನ್ನು ಕೂಡ 10 ವರ್ಷಕ್ಕೆ ನಿಗದಿಪಡಿಸಲಾಗಿದೆ. ಪಾಲಿಸಿದಾರನಿಗೆ ದೊರೆಯುವ ಕನಿಷ್ಠ ಮೊತ್ತ 1.5 ಲಕ್ಷ ರು., ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಈ ಪಾಲಿಸಿಯ ಚಂದಾದಾರರಾಗಬೇಕಿದ್ದರೆ ಕನಿಷ್ಠ 30,000 ರು. ಕಟ್ಟಬೇಕು. ನಂತರ 1,000 ರು. ಹೆಚ್ಚುತ್ತಾ ಹೋಗುತ್ತದೆ.

ವಿದ್ಯಾಭ್ಯಾಸಕ್ಕಾಗಿ, ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಹಣ ಹೂಡುವವರಿಗೆ, ಕಷ್ಟಪಟ್ಟು ದುಡಿದು ಹಣ ಉಳಿಸುವ ನೌಕರರಿಗಾಗಿ, ಉದ್ಯಮ ಸ್ಥಾಪಿಸಲು ಯೋಜಿಸುವವರಿಗಾಗಿ ಈ ಯೋಜನೆ ಅತ್ಯಂತ ಸೂಕ್ತವಾಗಿದೆ. ಇರುವ ನಿಯಮಗಳ ಪ್ರಕಾರ ಪಾಲಿಸಿದಾರನಿಗೆ ಆದಾಯ ತೆರಿಗೆ ಕಾಯ್ದೆಯ 80ಸಿ ನಿಯಮದಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ದೊರೆಯುತ್ತದೆ. ಒಂದು ವರ್ಷದ ನಂತರ ಸಾಲದ ಸೌಲಭ್ಯ ಕೂಡ ಇದೆ.

ಹೆಚ್ಚಿನ ವಿವರಗಳು ಬೇಕಿದ್ದರೆ ಸಂಪರ್ಕಿಸಿ

ಕಾರ್ಯನಿರ್ವಾಹಕ ನಿರ್ದೇಶಕ
ವಿಳಾಸ : ಎಲ್ಐಸಿ ಆಫ್ ಇಂಡಿಯಾ, ಸೆಂಟ್ರಲ್ ಆಫೀಸ್ ಮುಂಬೈ
ದೂರವಾಣಿ : 022 22028307,
ಈಮೇಲ್ : [email protected]
www.licindia.in

English summary
The Life Insurance Corporation of India(LIC) on March 1, Thursday launched a new plan ’Jeevan Vriddhi’ on the traditional platform. This is a single premium non linked insurance plan where the risk cover is 5 times of premium chosen by the customer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X