ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾಕರ ರೆಡ್ಡಿಯಿಂದ ದೂರವಾದ ಶ್ರೀರಾಮುಲು

By Srinath
|
Google Oneindia Kannada News

karunakara-reddy-no-more-with-us-sriramulu
ಬೆಂಗಳೂರು, ಫೆ.29: ಚಂಚಲಗೂಡ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ವರ್ಗವಾಗುತ್ತಿರುವ ಜನಾರ್ದನ ರೆಡ್ಡಿಯ ಸೋದರ ಕರುಣಾಕರ ರೆಡ್ಡಿ ಮತ್ತು ಬಳ್ಳಾರಿಯ ಸ್ವತಂತ್ರ ಹಕ್ಕಿ ಬಿ. ಶ್ರೀರಾಮುಲು ಪರಸ್ಪರ ದೂರವಾಗಿದ್ದಾರೆ. ಇದನ್ನು ಸ್ವತಃ ಶ್ರೀರಾಮುಲು ಮಂಗಳವಾರ ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲ. 'ಒಂದು ವೇಳೆ ಕರುಣಾಕರ ರೆಡ್ಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೆ ಖಂಡಿತವಾಗಿಯೂ ಅವರ ವಿರುದ್ಧ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ' ಘೋಷಿಸಿದ್ದಾರೆ. ಇದೇ ವೇಳೆ, ಜನಾರ್ದನ ರೆಡ್ಡಿ ನನ್ನ ಹಿತೈಷಿಯಾಗಿದ್ದರೂ ಹೊಸ ಪಕ್ಷ ಸೇರುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂಬ ಸಂದೇಶವನ್ನೂ ರಾಮುಲು ನೀಡಿದ್ದಾರೆ.

'ಮಾಜಿ ಸಚಿವ ಕರುಣಾಕರ ರೆಡ್ಡಿ ಬಿಜೆಪಿ ಪಕ್ಷದಲ್ಲಿದ್ದಾರೆ. ಅವರು ನಮ್ಮ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ಆದರೆ ಜನಾರ್ದನ ರೆಡ್ಡಿಯವರ ಮತ್ತೊಬ್ಬ ಸೋದರ ಸೋಮಶೇಖರ ರೆಡ್ಡಿ ನಮ್ಮೊಂದಿಗೇ ಇದ್ದಾರೆ. ಇನ್ನೂ ಅನೇಕರು ದೈಹಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ನಮ್ಮೊಂದಿಗೇ ಇದ್ದಾರೆ' ಎಂದು ಶ್ರೀರಾಮುಲು ಹೇಳಿದ್ದಾರೆ.

English summary
B Sriramulu, an independent MLA from Bellary rural and close aide of Janardhana Reddy has annonced that Karunakara Reddy, a BJP MLA is no more with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X