ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಿಲ್ ಮೇಲಿದೆ ಭೂ ಹಗರಣದ ಕರಿನೆರಳು

By Mahesh
|
Google Oneindia Kannada News

Sunil Kumar Karkala
ಬೆಂಗಳೂರು, ಫೆ.28: ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ 2007ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದಾಗ, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿಡಿಎ ನಿವೇಶನ ಪಡೆದ ಆರೋಪ ಹೊಂದಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಸೋಲುವುದಕ್ಕೂ ಈ ಭೂ ಹಗರಣ ಕಾರಣವಾಗಿತ್ತು ಎನ್ನಬಹುದು.

ಏನಿದು ಪ್ರಕರಣ? : 2007ರಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರವಿದ್ದ ಕಾಲ. ಸುನಿಲ್ ಕುಮಾರ್ ಅವರು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಖುದ್ದಾಗಿ ಅರ್ಜಿ ಸಲ್ಲಿಸಿ ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಎಂಬಲ್ಲಿ ಐದೂವರೆ ಎಕರೆ ಕೃಷಿ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದ್ದನ್ನು ಡೀನೋಟಿಫೈ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.

ಅರ್ಜಿಯ ಮೇಲೆ ಖುದ್ದು ಹಸ್ತಾಕ್ಷರದಲ್ಲಿ ಕುಮಾರಸ್ವಾಮಿಯವರು ಕಡತ ಸಂಖ್ಯೆ ಎಸ್‌ಸಿಎಂ 2/281/07ರಲ್ಲಿ ಸಿಎಂ ಸುಧಾರಣೆಗಳನ್ನು ಶಿಫಾರಸು ಮಾಡಿದ್ದರು.

ಭೂಸ್ವಾಧೀನ ಪ್ರಕ್ರಿಯೆಯಂದ ಕೈಬಿಡುವಂತೆ ಬಿಡಿಎಗೆ ಆದೇಶಿಸಿದ್ದರು. ಈ ಜಮೀನಿನ ಅಂದಿನ ಮಾರುಕಟ್ಟೆ ಮೌಲ್ಯ ಕನಿಷ್ಠವೆಂದರೂ 50 ಕೋಟಿ ರು ಎಂದು ಅಂದಾಜು ಮಾಡಲಾಗಿದೆ.

English summary
Udupi- Chikmagalur By Election BJP Candidate Former Karkala MLA Sunil Kumar is accused in land scam benefited from denotification in BDA site in Bangalore by former CM HD Kumaraswamy during his tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X