ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃತಕ ಗರ್ಭಧಾರಣೆಗೆ ಪೋಪ್ ತೀವ್ರ ವಿರೋಧ

By Mahesh
|
Google Oneindia Kannada News

Pope Benedict XVI
ವ್ಯಾಟಿಕನ್, ಫೆ.28: ಕೃತಕ ಗರ್ಭಧಾರಣೆ ಮೂಲಕ ಹಣ ಮಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು ಎಂದು ಸಲಹೆ ನೀಡಿರುವ ಪೋಪ್, ಇದರಿಂದ ಸಿಗುವ ಸುಲಭದ ಗಳಿಕೆ ಪಾಪದ ಸಾಲಿಗೆ ಸೇರುತ್ತದೆ.

ಸೃಷ್ಟಿಕರ್ತನ ವಿರುದ್ಧ ಉದ್ಧಟತನ ಸಲ್ಲದು ಎಂದಿದ್ದಾರೆ. ವೀರ್ಯ ಅಥವಾ ಅಂಡಾಣು ದಾನ ಮತ್ತು ಐವಿಎಫ್ (in vitro fertilization (IVF) )ನಂತಹ ಗರ್ಭಧಾರಣೆ ವಿಧಾನಗಳನ್ನು ಕ್ಯಾಥೊಲಿಕ್ ಸಮುದಾಯಕ್ಕೆ ನಿಷೇಧಿಸಲಾಗಿದೆ ಎಂದು ಪೋಪ್ ಹೇಳಿದ್ದಾರೆ.

ಈಗೀಗ ಸಹಜ ಗರ್ಭಧಾರಣೆ ವಿರಳವಾಗುತ್ತಿದೆ. ಬದಲಾಗಿರುವ ಜೀವನ ಶೈಲಿ, ವಾತಾವರಣ...ಮುಂತಾದವುಗಳ ಪ್ರಭಾವ ದಿಂದ ದಂಪತಿಗಳು ಕೃತಕ ಗರ್ಭ ಧಾರಣೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತಿದೆ.

ಇಂಥ ಹೊತ್ತಿನಲ್ಲಿ ದಂಪತಿ ಮಗುವಿಗಾಗಿ ಕೃತಕ ಗರ್ಭ ಧಾರಣೆ ವಿಧಾನಗಳನ್ನು ಬಳಸಬಾರದು. ಗರ್ಭಧರಿಸಲು ಪ್ರನಾಳ ಶಿಶು ಮುಂತಾದ ಕೃತಕ ವಿಧಾನಗಳನ್ನು ಬಳಸುವುದು ಉದ್ಧಟತನ ಎಂದು ಹದಿನಾರನೇ ಪೋಪ್ ಬೆನೆಡಿಕ್ಟ್ ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಮಗುವನ್ನು ಗಂಡ ಮತ್ತು ಹೆಂಡತಿ ಸಹಜ ಮಿಲನ ಕ್ರಿಯೆಯ ಗರ್ಭ ಧಾರಣೆಯಿಂದ ಪಡೆಯುವುದು ಮಾತ್ರ ಸಮ್ಮತ ವಿಧಾನ ಎಂದಿದ್ದಾರೆ!

ಪೋಪ್ ಸಲಹೆ ಹೊಸ ವಿವಾದ ಸೃಷ್ಟಿಸುವ ಸಾಧ್ಯತೆಗಳಿದೆ. ಚರ್ಚ್ ನ ಸಿಬ್ಬಂದಿಗಳು ವೀರ್ಯದಾನ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಬಂಜೆತನ ಹೋಗಲಾಡಿಸಲು ನಡೆಯುತ್ತಿರುವ ಸಂಶೋಧನೆಗೆ ವ್ಯಾಟಿಕಾನ್ ಚರ್ಚ್ ಬೆಂಬಲ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದೆ.

English summary
Pope Benedict XVI in a Vatican conference on infertility in Rome said that married couples should shun artificial methods of conception and said that the only acceptable way of conceiving was sex between husband and wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X