ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ: ಶ್ರೀಲಕ್ಷ್ಮಿ ವಿರುದ್ಧ ಕೋರ್ಟಿಗೆ ಬಲವಾದ ಸಾಕ್ಷ್ಯ

By Srinath
|
Google Oneindia Kannada News

reddy-cbi-gives-crucial-proof-on-srilakshmi-sc
ಹೈದರಾಬಾದ್, ಫೆ.28: ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ನೀರೆರೆದ ಆರೋಪದಲ್ಲಿ ಚಂಚಲಗೂಡ ಜೈಲುಪಾಲಾಗಿರುವ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ವಿರುದ್ಧ ಸಿಬಿಐ 'ಬಲವಾದ ಮತ್ತು ಮಹತ್ವವಾದ' ದಾಖಲೆಗಳನ್ನು ಸುಪ್ರೀಂಕೋರ್ಟಿನಲ್ಲಿ ಸೋಮವಾರ ಸಲ್ಲಿಸಿದೆ.

ಅಕ್ರಮ ಗಣಿಗಾರಿಕೆಯ ಸಹ ಆರೋಪಿ ಶ್ರೀಲಕ್ಷ್ಮಿ ವಿರುದ್ಧ ಸಿಬಿಐ ಅನೇಕ ಮಹತ್ವದ ದಾಖಲೆಗಳನ್ನು ಕಲೆ ಹಾಕಿದೆ. ಅದನ್ನೆಲ್ಲ ಮುಚ್ಚಿದ ಲಕೋಟೆಯಲ್ಲಿ ಕೋರ್ಟಿಗೆ ಸಲ್ಲಿಸುತ್ತಿರುವುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ಟಂಖಾ ಅವರು ನ್ಯಾ. ಎಚ್ಎಲ್ ದತ್ತು ಮತ್ತು ನ್ಯಾ. ಸಿಕೆ ಪ್ರಸಾದ್ ಅವರ ನ್ಯಾಯಪೀಠಕ್ಕೆ ತಿಳಿಸಿತು.

ಸಿಬಿಐ ಪರ ವಕೀಲರು ನ್ಯಾಯಪೀಠದೆದುರು ಹೀಗೆ ಹೇಳುತ್ತಿದ್ದಂತೆ ಶ್ರೀಲಕ್ಷ್ಮಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಅವರ ವಕೀಲರು ಪೀಠವನ್ನು ಕೋರಿದರು. ಶ್ರೀಲಕ್ಷ್ಮಿ ಈ ಹಿಂದೆ ಜನವರಿ 16ರಂದು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ತನದನಂತರ ಮತ್ತೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ.

English summary
The CBI informed the Supreme Court on Monday (Feb 27) that it had placed on record certain 'crucial evidence' against Andhra Pradesh IAS officer Y. Srilakshmi, a co-accused in the Obulapuram illegal mining case against former Karnataka minister Gali Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X