ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದರಿ ಸೇರಿ ಹಲವರಿಗೆ ಗುಲ್ಬರ್ಗಾ ಗೌರವ ಡಾಕ್ಟರೇಟ್

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Honorary doctorate to Shankar Bidari and others
ಗುಲ್ಬರ್ಗಾ, ಫೆ. 28 : ಗುಲ್ಬರ್ಗಾ ವಿಶ್ವಾವಿದ್ಯಾಲಯದಲ್ಲಿ ಸೋಮವಾರ ನಡೆದ 30ನೇ ಘಟಿಕೋತ್ಸವದಲ್ಲಿ ನಾನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹತ್ತು ಜನ ಗಣ್ಯರಿಗೆ ಗೌರವ ಡಾಕ್ಟರೇಟ್, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ವಿತರಿಸಿ ಗೌರವಿಸಲಾಯಿತು.

ಜಿಡಗಾ-ಮುಗುಳಖೋಡ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಅಬ್ಬೇತುಮಕೂರಿನ ಶ್ರೀ ಗಂಗಾಧರ ಮಹಾಸ್ವಾಮಿಗಳು, ಮಾಜಿ ಸಚಿವ ಭೀಮಣ್ಣ ಖಂಡ್ರೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವಪ್ಪ ಬಿದರಿ, ವಿಜ್ಞಾನಿ ಅಮರ್‌ನಾಥ ಗುಪ್ತಾ, ವಿದ್ವಾನ್ ಎಂ.ಶಿವಕುಮಾರ ಸ್ವಾಮಿ, ನಾಡೋಜ ವಿ.ಟಿ.ಕಾಳೆ, ದಲಿತ ಮುಖಂಡ ವಿಠ್ಠಲ್ ದೊಡ್ಡಮನಿ, ಸಾಹಿತಿ ಎಂ.ಎ.ವಾಹಬ್ ಅಂದಲೀಬ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಗೈರು ಹಾಜರಿದ್ದರು.

ಅನಿತಾ ಕ್ರಿಸ್ಟಿನಾ ಅನಿಲ್ ಸ್ಮಥ್ ಡಿ ಅವರು ಎಂಬಿಎದಲ್ಲಿ 8 ಚಿನ್ನದ ಪದಕ ಪಡೆದರು. ಎಂಎ ಕನ್ನಡದಲ್ಲಿ ಪ್ರಿಯಂಕ ಬಸವರಾಜ 7, ಗಣಿತದಲ್ಲಿ ಪವಿತ್ರಾ ಪಂಡಿತರಾವ ೬, ಜೀವ ರಾಸಯನ ಶಾಸ್ತ್ರದಲ್ಲಿ ಮಹಿಮಾ ಜ್ಯೋತಿ ವೆಂಕಟರತ್ನಂ 5, ಗಣಿತದಲ್ಲಿ ಹೀನಾ ಕೌಸರ್ ಅಬ್ದುಲ್ ರೆಹೆಮಾನ್, ಸೂಕ್ಷ್ಮ ಜೀವಶಾಸ್ತ್ರ ವಿಷಯದಲ್ಲಿ ಪ್ರಕಾಶ ಚವ್ಹಾಣ 5 ಚಿನ್ನ ಪದಕ ಪಡೆದರು. ಸ್ನಾತಕ ವಿದ್ಯಾರ್ಥಿಗಳ ಪೈಕಿ ಕಾನೂನು ವಿಷಯದಲ್ಲಿ ಶಶಿಕಾಂತ ಪರಶುರಾಮ ಕಲಾಲ್ 5, ಬಿಎ ಸಮಾಜಶಾಸ್ತ್ರದಲ್ಲಿ ಝರೀನಾ ಜೆ.ಎಂ ಅವರು 3 ಚಿನ್ನದ ಪದಕ ಪಡೆದರು.

105 ವಿದ್ಯಾರ್ಥಿಗಳು ಪಿಎಚ್‌ಡಿ, 13 ವಿದ್ಯಾರ್ಥಿಗಳು ಎಂಫಿಲ್ ಪದವಿ ಪಡೆದರು. 2937 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, 18,641 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದರು. ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ, ವಿಶ್ವಸಂಸ್ಥೆಯ ವಿಶ್ರಾಂತ ಸಹಾಯಕ ಮಹಾನಿರ್ದೇಶಕ ಡಾ.ಪ್ರೇಮನಾಥ, ಕುಲಸಚಿವ ಡಾ.ಎಸ್.ಎಲ್ ಹಿರೇಮಠ, ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಬಿ.ನಾಯಕ ಇತರರು ಉಪಸ್ಥಿತರಿದ್ದರು.

English summary
Director General of Police Shankar Mahadevappa Bidari and others were conferred with honorary doctorate by Gulbarga University on Monday. Students with highest marks were also presented with Gold medals. Report by Sagar Desai, Yadgir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X