ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಟ್ಕಾ, ಪಾನ್ ಮಸಾಲ ನಿಷೇಧ: ಕೇಂದ್ರ ಸರ್ಕಾರ

By Mahesh
|
Google Oneindia Kannada News

Gutka Pan Masala Ban
ನವದೆಹಲಿ, ಫೆ,27: ಭಾರತದ ಕಾನೂನಿನ ಪ್ರಕಾರ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಗುಟ್ಕಾ, ಪಾನ್ ಮಸಾಲ ಮುಂತಾದ ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ.

ಆಹಾರ ಪ್ಯಾಕೇಜಿಂಗ್ ಮಾಡುವಾಗ ಗುಟ್ಕಾವನ್ನು ಕೂಡಾ ಆಹಾರ ಪದಾರ್ಥಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸ್ಪಷ್ಟನೆ ಕೇಳಿದ್ದೇವೆ. ಗುಟ್ಕಾ ಆಹಾರ ಪಟ್ಟಿಗೆ ಸೇರುವುದಾದರೆ, Food Safety and Standards Act ಪ್ರಕಾರ ಅದು ಅಕ್ರಮವಾಗುತ್ತದೆ.

ತಂಬಾಕು, ಜರ್ದಾಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಆಹಾರಗಳ ಪಟ್ಟಿಗೆ ಸೇರಿಸುಮ್ತಿಲ್ ಎಂದು ಎಲ್ಲಾ ರಾಜ್ಯಗಳಿಗೂ ಸದ್ಯದಲ್ಲೇ ಸೂಚನೆ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಕೆ ದೆಸೈರಾಜು ಅವರು ಹೇಳಿದ್ದಾರೆ.

PFA ಕಾಯಿದೆ 29(v) ಪ್ರಕಾರ ಪಾನ್ ಮಸಾಲ, ಗುಟ್ಕಾ, ಸುಪಾರಿ ತಿನ್ನಬಹುದಾದ ಪದಾರ್ಥ ಎಂದು ಮಾರಾಟಕ್ಕೆ ಲಭ್ಯವಿದೆ.

ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಶಾಸನ ವಿಧಿಸಿದ ಎಚ್ಚರಿಕೆ ಪಾಲನೆಯಾಗಬೇಕು. ಧೂಮಪಾನ ರಹಿತ ತಂಬಾಕು ಸೇವನೆ ಭಾರತದಲ್ಲಿ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಈ ಚಟಕ್ಕೆ ತುತ್ತಾಗಿದ್ದಾರೆ.

English summary
As per the Indian law, it is illegal to mix harmful materials like gutkha, pan masala and other such edible forms of tobacco in the food list, the Union Health Ministry has decided to ban all the tobacco products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X