ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬೋಟಾಬಾದ್: ಲಾಡೆನ್ ಸತ್ತ ಮನೆ ಪೀಸ್ ಪೀಸ್

By Srinath
|
Google Oneindia Kannada News

laden-house-demolished-by-pakistan-authorities
ಇಸ್ಲಾಮಾಬಾದ್, ಫೆ.26: ಅರಿಭಯಂಕರ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಕೊನೆಗಾಲದಲ್ಲಿದ್ದ ಮನೆಯನ್ನು ಪಾಕಿಸ್ತಾನದ ಸೇನೆ ನುಚ್ಚುನೂರು ಮಾಡಿದೆ. ಶನಿವಾರ ರಾತ್ರಿ 10 ಗಂಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೊದಲು ಬೃಹತ್ತಾದ ಕಾಂಪೌಂಡ್ ಅನನ್ನು ನೆಲಸಮಗೊಳಿಸಿದರು. ನಂತರ ಮುಖ್ಯ ಕಟ್ಟಡದತ್ತ ತೆರಳಿದ ಬೃಹತ್ ಕ್ರೇನ್ ಗಳು ಮೂರು ಅಂತಸ್ತಿನ ಕಟ್ಟಡವನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸಿದವು.

ಅಗತ್ಯ ಮುಂಜಾಗ್ರತೆ ವಹಿಸಿದ್ದ ಅಧಿಕಾರಿಗಳು, ಬಿಲಾಲ್ ನಗರದಲ್ಲಿದ್ದ ಈ ಕಟ್ಟಡದತ್ತ ಸಾಗುವ ಎಲ್ಲ ಮಾರ್ಗಗಳನ್ನೂ ಬಂದ್ ಮಾಡಲಾಗಿತ್ತು. ಕಳೆದ ಮೇ 2ರಂದು ಅಮೆರಿಕದ ಸೀಲ್ ಯೋಧರು ಈ ಕಟ್ಟಡದಲ್ಲಿ ಅಡಗಿದ್ದ ಲಾಡೆನ್ ಮೇಲೆ ಮಧ್ಯರಾತ್ರಿ ಗುಂಡಿನ ಮರೆಗಳೆದು ಲಾಡೆನ್ ಆಟಾಟೋಪವನ್ನು ಖತಂಗೊಳಿಸಿದ್ದರು.

ಈ ಮನೆಯನ್ನು ನೋಡಲು ಜನ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ತಾಣವನ್ನು ಪವಿತ್ರ ಯಾತ್ರಾಸ್ಥಳವಾಗಿ ಕಾಣುತ್ತಿದ್ದರು. ಇದು ಪಾಕ್ ಸರಕಾರಕ್ಕೆ ತೀವ್ರ ಮುಜುಗರ ತಂದಿತ್ತು. ಐಎಸ್ಐ ಆಣಿತಿಯ ಮೇರೆಗೆ ಕಟ್ಟಡವನ್ನು ನಿರ್ನಾಮ ಮಾಡಲಾಗಿದೆ ಎನ್ನಲಾಗಿದೆ. ವಿಶಾಲವಾಗಿದ್ದ ಈ ಮನೆಯ ಮಾರುಕಟ್ಟೆ ದರ ಅಂದಾಜು 300,000 ಡಾಲರ್ ಇರಬಹುದು.

English summary
Pakistan authorities on Saturday night demolished the three-story house in Abbottabad where Osama bin Laden lived for years and died last May during a raid by U.S. Navy SEALs in an apparent bid to stop it becoming a tourist site or shrine for al Qaeda supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X