• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದುವರಿದ ಹೈದ್ರಾಬಾದ್ ಅನಂತನಿಧಿ ಕುತೂಹಲ

By Srinath
|

ಹೈದರಾಬಾದ್, ಫೆ.26: ಕಳೆದ ಭಾನುವಾರ ಆಂಧ್ರ ವಿಧಾನಸಭೆ ಸಚಿವಾಲಯದ ಎದುರು ಪುರಾತನ ವಿದ್ಯಾರಣ್ಯ ಹೈಸ್ಕೂಲ್ ನೆಲಮಾಳಿಗೆಯಲ್ಲಿ 'ಅನಂತ ಸಂಪತ್ತು' ಇದೆಯೆಂದು ಕಾಡ್ಗಿಚ್ಚಿನಂತೆ ಹಬ್ಬಿದ್ದ ಸುದ್ದಿ ದೃಢವಾಗುವ ಲಕ್ಷಣಗಳಿವೆ.

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (NMDC) ನಿಧಿಯಿರತಕ್ಕಂತಹ ಸುರಂಗ ಅಥವಾ ಅಗೇವು ಇರುವ 2 ಜಾಗಗಳನ್ನು ಪತ್ತೆ ಮಾಡಿದೆ. ಇದನ್ನು ಖಚಿತಪಡಿಸಿ ನಿಗಮವು ಶನಿವಾರ ಪ್ರಾಚ್ಯ ವಸ್ತು ಇಲಾಖೆಗೆ (ASI) ಪ್ರಾಥಮಿಕ ವರದಿ ಸಲ್ಲಿಸಿದೆ. ಇಸ್ರೋ ಉಪಗ್ರಹ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಆಯಸ್ಕಾಂತ ಮತ್ತು ಭೂಗರ್ಭ ಶಾಸ್ತ್ರ ಆಧಾರದಲ್ಲಿ ರಾಡಾರ್ ಟೆಸ್ಟ್ ಗಳನ್ನು ಕೈಗೊಳ್ಳಲಾಗಿದೆ.

ಫಲಿತಾಂಶ 'ಧನಾತ್ಮಕ'ವಾಗಿದೆ. ಎರಡು ಕಡೆ ಸುರಂಗ ನಿಧಿ ಇರುವುದು ತಿಳಿದುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. NMDC ತನ್ನ ಅಂತಿಮ ವರದಿಯನ್ನು ಮುಂದಿನ ಬುಧವಾರ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸರಂಗ ಕೊರೆಯುವ ಕಾರ್ಯ ಪುನರಾರಂಭವಾಗಲಿದೆ ಎಂದು ASI ತಿಳಿಸಿದೆ.

ಈ ಮಧ್ಯೆ, ಎರಡೂ ಸುರಂಗಗಳು ವಿದ್ಯಾರಣ್ಯ ಹೈಸ್ಕೂಲ್ ನೆಲದಡಿಯಿದ್ದು ಸುರಂಗ ಕೊರೆಯುವುದು ಸದ್ಯಕ್ಕೆ ಬೇಡ. ಮಕ್ಕಳ ಸುರಕ್ಷತೆ ಮುಖ್ಯ. ಜತೆಗೆ ಶಾಲಾ ಮಕ್ಕಳು ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದು, ಫೆ. 27ಕ್ಕೆ ಮುಗಿಯಲಿದೆ. ಆ ಮೇಲೆ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಶಾಲಾ ಅಡಳಿತ ಮಂಡಳಿ ಇಲಾಖೆಗೆ ಮನವಿ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Geophysicists from the National Mineral Development Corporation have zeroed in on two probable points of entry into the cavity or tunnel at Hyderabad Vidyaranya School which could lead to the place where the treasure trove they have been hunting for, is buried.
 
 Geophysicists from the National Mineral Development Corporation have zeroed in on two probable points of entry into the cavity or tunnel at Hyderabad Vidyaranya School which could lead to the place where the treasure trove they have been hunting for, is buried.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more