ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮುಕ ಶಿಕ್ಷಕ ಫಾಲಾಕ್ಷಪ್ಪನಿಗೆ ಬಿತ್ತು ಕಪಾಳಮೋಕ್ಷ

By Prasad
|
Google Oneindia Kannada News

Lecher teacher beaten up in Bhadravati
ಭದ್ರಾವತಿ, ಫೆ. 25 : ಲೆಕ್ಕ ಹೇಳಿಕೊಡುವುದಾಗಿ ವಿದ್ಯಾರ್ಥಿನಿಯನ್ನು ತನ್ನ ಕೋಣೆಗೆ ಕರೆಯಿಸಿಕೊಂಡು ಅಸಭ್ಯವಾಗಿ ವರ್ತಿಸಿದ ಭದ್ರಾವತಿಯ ಸಂಕ್ಲೀಪುರದಲ್ಲಿರುವ ಸರಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಕಾಮುಕ ಮುಖ್ಯೋಪಾಧ್ಯಾಯನನ್ನು ಸಾರ್ವಜನಿಕರು ಮತ್ತು ಪಾಲಕರು ಮನಬಂದಂತೆ ಬಾರಿಸಿದ್ದಾರೆ.

ನಿವೃತ್ತಿಯ ಹಂತ ತಲುಪಿರುವ, ಬೋಳು ತಲೆಯ, 55 ವರ್ಷ ಈ ಶಿಕ್ಷಕನೇ ಫಾಲಾಕ್ಷಪ್ಪ. ಕಳೆದ ಒಂದು ವರ್ಷದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಗಣಿತ, ಸಮಾಜ ಮತ್ತು ವಿಜ್ಞಾನ ಪಾಠ ಮಾಡುತ್ತಿದ್ದಾನೆ. ಪಾಠ ಮಾಡುವ ಬದಲು ಅಸಭ್ಯವಾಗಿ ವರ್ತಿಸಿ ಈಗ ಹೊಡೆತ ತಿಂದು ಪೊಲೀಸರ ಅತಿಥಿಯಾಗಿದ್ದಾನೆ.

ಫಾಲಾಕ್ಷಪ್ಪ ಅಸಹ್ಯವಾಗಿ ವರ್ತಿಸಿದ್ದನ್ನು 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೇ ಪೋಷಕರಿಗೆ ತಿಳಿಸಿದ್ದಾಳೆ. ತನ್ನ ಕೋಣೆಗೆ ಕರೆಸಿಕೊಂಡ ಫಾಲಾಕ್ಷಪ್ಪ ವಿದ್ಯಾರ್ಥಿನಿಯ ಮೈಮೇಲೆ ಕೈಯಾಡಿಸಲು ಆರಂಭಿಸಿದ್ದಾನೆ. ಆಕೆ ಕೂಗಲು ಬಾಯಿ ತೆರೆದಾಗ ಬಾಯಿಮುಚ್ಚಿ ಬೆದರಿಕೆ ಹಾಕಿದ್ದಾನೆ. ಆಕೆ ಹೇಗೋ ಪಾರಾಗಿ ಪಾಲಕರಿಗೆ ಅಲ್ಲಿ ನಡೆದಿದ್ದನ್ನು ವಿವರಿಸಿದ್ದಾಳೆ.

ಕೂಡಲೆ ಶಾಲೆಗೆ ಧಾವಿಸಿದ ಪಾಲಕರು ಮತ್ತು ಸಾರ್ವಜನಿಕರು ಫಾಲಾಕ್ಷನಿಗೆ ವಿದ್ಯಾರ್ಥಿಗಳೆದುರೇ ಗೂಸಾ ಕೊಟ್ಟಿದ್ದಾರೆ. ಕೆಲ ವಿದ್ಯಾರ್ಥಿಗಳು ತಮ್ಮ ಅನುಭವದ ಬಗ್ಗೆ ಹೇಳಿದ್ದು, ಆತ ಟಾಯ್ಲೆಟ್‌ಗೂ ಬಂದು ಇಣುಕುತ್ತಿದ್ದ. ಹೇಳಲು ಶಿಕ್ಷಕನಾದರೂ ಪಾಠವನ್ನೇ ಸರಿಯಾಗಿ ಮಾಡುತ್ತಿರಲಿಲ್ಲ. ಮಾಡುತ್ತಿದ್ದುದೆಲ್ಲ ಬರೀ ಕಾಮ ಚೇಷ್ಟೆಗಳೇ.

ಕರ್ನಾಟಕದ ಈ ಶಿಕ್ಷಕರಿಗೆ ಇದೇನಾಗಿದೆ? ಕೆಲ ದಿನಗಳ ಹಿಂದೆ ಕೆ.ಆರ್. ಪುರದಲ್ಲಿ ಕೂಡ ದಲಿತ ವಿದ್ಯಾರ್ಥಿನಿಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳಲು ಹೋದ ಶಿಕ್ಷಕನನ್ನು ಸಾರ್ವಜನಿಕರೇ ಶಿಕ್ಷಿಸಿದ್ದರು. ಇನ್ನು ಟ್ರಿಯೋ ಅಂತಾರಾಷ್ಟ್ರೀಯ ಶಾಲೆಯ ಪ್ರಿನ್ಸಿಪಾಲ್ ಪಾಲ್ ಮೀಕಿನ್ ಮಾಡಬಾರದ್ದೆಲ್ಲ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉನ್ನತ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ?

English summary
A lecher teacher Phalakshappa (55), who misbehaved with 5th standard student in Govt Kannada primary school in Sanklipur in Bhadravati taluk, has been beaten up by public and arrested by police. Higher education minister Vishweshwar Hegde Kageri should take a note of this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X