ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಲಕ್ಷ ಬ್ಯಾಂಕ್‌ ನೌಕರರು ಮಂಗಳವಾರ ಮುಷ್ಕರಕ್ಕೆ

By Srinath
|
Google Oneindia Kannada News

govt-bank-employees-strike-on-feb-28
ನವದೆಹಲಿ, ಫೆ. 24: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಏಳು ಕಾರ್ಮಿಕ ಸಂಘಟನೆಗಳ (AIBEA) ಅಂದಾಜು 8 ಲಕ್ಷ ಉದ್ಯೋಗಿಗಳು ಫೆ. 28ರಂದು ಒಂದು ದಿನದ ಮುಷ್ಕರಕ್ಕೆ ಕರೆ ಕೊಟ್ಟಿವೆ. ಸುಸ್ತಿ ಸಾಲದ ಮರು ಪಾವತಿಗೆ ಕಠಿಣ ಕ್ರಮ, ಬ್ಯಾಂಕ್‌ಗಳ ಪ್ರಮುಖವಲ್ಲದ ಕೆಲಸ ಕಾರ್ಯಗಳನ್ನು ಖಾಸಗಿ ವಲಯಕ್ಕೆ ಹೊರಗುತ್ತಿಗೆ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಮುಷ್ಕರ ನಡೆಸಲಿದ್ದಾರೆ.

ಮುಷ್ಕರ ಯಶಸ್ವಿಯಾದರೆ ಅದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಹಿವಾಟಿಗೆ ತೀವ್ರ ಧಕ್ಕೆ ತಟ್ಟುವ ಸಾಧ್ಯತೆಗಳಿವೆ. ಈ ಸರಕಾರಿ ಬ್ಯಾಂಕುಗಳು ದೇಶಾದ್ಯಂತ 87,000 ಶಾಖೆಗಳನ್ನು ಹೊಂದಿದ್ದು, ದೇಶದ ಒಟ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಶೇ. 75ರಷ್ಟು ಪಾಲು ಹಿಂದಿವೆ.

ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು ದಿನೇ ದಿನೇ ಹೆಚ್ಚುತ್ತಿದೆ. ಇದು ಬ್ಯಾಂಕ್‌ಗಳ ಲಾಭ ಮತ್ತು ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಾಲದ ಮರು ಪಾವತಿಗೆ ಕಠಿಣ ಕ್ರಮಗಳ ಜಾರಿಗೆ ಒತ್ತಾಯಿಸಿ ಮತ್ತು ಖಂಡೇಲ್‌ವಾಲ್ ಸಮಿತಿಯ ಏಕಪಕ್ಷೀಯ ಶಿಫಾರಸುಗಳ ಜಾರಿ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ತಿಳಿಸಿದ್ದಾರೆ.

English summary
Seven employees' unions of PSU banks have given a call for strike on February 28, demanding stringent measures to recover bad loans and opposing outsourcing of non-core activities to private sector. There are about 87,000 branches of public sector banks across the country. The state-owned lenders control about 75 per cent banking business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X