ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ನಿಷೇಧಕ್ಕೆ ಮತ್ತೊಮ್ಮೆ ಚಿಂತನೆ

By Mahesh
|
Google Oneindia Kannada News

Gays
ನವದೆಹಲಿ, ಫೆ.23: ಸಲಿಂಗಕಾಮದ ಬಗ್ಗೆ ಇರುವ ಐಪಿಸಿ ಸೆಕ್ಷನ್ 377ಕ್ಕೆ ತಿದ್ದುಪಡಿ ಮಾಡಿ ಗೇ ಸೆಕ್ಸ್ ಗೆ ಮತ್ತೊಮ್ಮೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವಾಲಯದ ಪರ ವಕೀಲರು ಸುಪ್ರೀಂಕೋರ್ಟ್ ನಲ್ಲಿ ಗುರುವಾರ(ಫೆ.23) ಹೇಳಿದ್ದಾರೆ.

'ಗೇ ಸೆಕ್ಸ್ ಭಾರತದ ಸಮಾಜಲ್ಲಿ ಒಪ್ಪಲು ಸಾಧ್ಯವಿಲ್ಲ. ಇದೊಂದು ಸಾಮಾಜಿಕ ಪಿಡುಗು. ಈ ರೀತಿ ಕಾಮಾಚರಣೆಗೆ ಅನುವು ಮಾಡಿಕೊಟ್ಟರೆ ಭಯಾನಕ ಕಾಯಿಲೆಗಳು ವ್ಯಾಪ್ತಿಸುತ್ತದೆ' ಎಂದು ಗೃಹ ಸಚಿವಾಲಯದ ಪರ ವೀಲ ಪಿಪಿ ಮಲ್ಹೋತ್ರಾ ಅವರು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದರು.

ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳವನ್ನು ತಪ್ಪಿಸಲು ಗೇ ಸೆಕ್ಸ್ ಕುರಿತು ಇರುವ ಕಾನೂನಿನಲ್ಲಿ ತಿದ್ದುಪಡಿಗೆ ಅನುವು ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.

2009ರಲ್ಲಿ ವಯಸ್ಕರ ನಡುವಿನ ಗೇ ಸೆಕ್ಸ್ ಗೆ ದೆಹಲಿ ಹೈ ಕೋರ್ಟ್ ಅನುಮತಿ ನೀಡಿ ಐಪಿಸಿ ಸೆಕ್ಷನ್ 377ಕ್ಕೆ ತಿದ್ದುಪಡಿಗೆ ಸೂಚಿಸಿತ್ತು. ಆದರೆ, ಸಲಿಂಗಕಾಮದ ನೆಪದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದೆ ಎಂದು ಗೃಹ ಸಚಿವಾಲಯ ಅಂಕಿಅಂಶಗಳನ್ನು ಸಲ್ಲಿಸಿದೆ.

English summary
The Union Home Ministry on Thursday, Feb 23 told supreme court that it has strongly opposed the decriminalisation of gay sex as homosexuality was immoral, against nature and spreads HIV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X