ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಬೇಡಿಕೆ, ಉತ್ಪಾದನೆ, ಲೋಡ್ ಶೆಡ್ಡಿಂಗ್

By Mahesh
|
Google Oneindia Kannada News

Power Generation Karnataka
ಬೆಂಗಳೂರು, ಫೆ.20: ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ, ಲೋಡ್ ಶೆಡ್ಡಿಂಗ್ ಸಾಮಾನ್ಯ ಸಂಗತಿಯಾಗಿದ್ದು, ದೈನಂದಿನ ಬದುಕಿನ ಭಾಗವಾಗಿ ಹಾಸುಹೊಕ್ಕಿದೆ. ವಿದ್ಯುತ್ ಸಮಸ್ಯೆಗೆ ದೀರ್ಘ ಇತಿಹಾಸವಿದೆ.

ಇಂಧನ ಇಲಾಖೆ ಹೊಸ ಪ್ರಯತ್ನಗಳ ನಡುವೆ ಬೇಡಿಕೆಗೆ ತಕ್ಕ ಉತ್ಪಾದನೆಗೆ ಸಾಧಿಸಲಾಗದೆ ರಾಜ್ಯದ ಬಹುಭಾಗ ಕತ್ತಲಲ್ಲಿ ಮುಳುಗುವಂತಾಗಿದೆ. ನಗರ ಪ್ರದೇಶ ಹೊರತುಪಡಿಸಿ ನಾಲ್ಕು ದಿನ ಮಟ್ಟಿಗೆ ಎಂದು ಆರಂಭವಾದ ಲೋಡ್ ಶೆಡ್ಡಿಂಗ್ ಇನ್ನಷ್ಟು ಕಾಲ ಮುಂದುವರೆಯಲಿದೆ ಎಂದು ಬೆಸ್ಕಾಂ ಎಂದಿ ಪಿ ಮಣಿವಣ್ಣನ್ ಹೇಳಿದ್ದಾರೆ.

ವಿದ್ಯುಚ್ಛಕ್ತಿ ಬೇಡಿಕೆ, ಉತ್ಪಾದನೆ, ಪೂರೈಕೆ, ಕೊರತೆ ಬಗ್ಗೆ ಕಣ್ಣೋಟ ಇಲ್ಲಿದೆ...

ಬೇಡಿಕೆ: ಪ್ರಸಕ್ತ ವರ್ಷ ಪ್ರತಿದಿನದ ಬೇಡಿಕೆ ಸುಮಾರು 40-45 ದಶಲಕ್ಷ ಯೂನಿಟ್ ವರೆಗೂ ಇದೆ. ಕಳೆದ ವರ್ಷ ಪ್ರತಿದಿನದ ಬೇಡಿಕೆ ಸುಮಾರು 28 ರಿಂದ 35 ದಶಲಕ್ಷ ಯೂನಿಟ್ ಇತ್ತು. ಈಗ ಕೆಪಿಟಿಸಿಲ್ ಪ್ರತಿದಿನ 37 ದಶಲಕ್ಷ ಯೂನಿಟ್ ಉತ್ಪಾದನೆ ಮಾಡುತ್ತಿದ್ದು, ಪ್ರತಿ ತಿಂಗಳು ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚು. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ತನಕ ಬೇಡಿಕೆ ತಗ್ಗುವುದಿಲ್ಲ. ಪ್ರತಿ ದಿನ 10 ರಿಂದ 15 ದಶಲಕ್ಷ ಯೂನಿಟ್ ಕೊರತೆ ಅನುಭವಿಸಲಾಗುತ್ತಿದೆ.

ಲೋಡ್ ಶೆಡ್ಡಿಂಗ್: ಈ ಕೊರತೆ ತುಂಬಲು ರಾಜ್ಯದಾದ್ಯಂತ ಲೋಡ್ ಶೆಡ್ಡಿಂಗ್ ಎಂಬ ಅಸ್ತ್ರವನ್ನು ಪ್ರಯೋಗಿಸಲಾಗುತ್ತದೆ.

ಈ ಅಸ್ತ್ರಕ್ಕೆ ಮೊದಲ ಬಲಿಯಾಗುವುದು ರೈತಾಪಿ ವರ್ಗ. ಬಿಸಿಲು ಹೆಚ್ಚಾಗಿ ಮನೆಯಲ್ಲಿ ಫ್ಯಾನ್ ತಿರುಗದಿದ್ದಾಗ ಅರೆ ನಗರವಾಸಿಗಳು, ನಗರವಾಸಿಗಳಿಗೆ ಲೋಡ್ ಶೆಡ್ಡಿಂಗ್ ಬಿಸಿ ತಟ್ಟುತ್ತದೆ. ಬೆಂಗಳೂರಿನಲ್ಲಿ ಬಹುತೇಕ ಲೋಡ್ ಶೆಡ್ಡಿಂಗ್ ಕಡಿಮೆ ಮಾಡಿ ಇಂಧನ ಸಚಿವೆ ಶೋಭಾ ಜಾಣತನ ಮೆರೆದಿದ್ದಾರೆ.

ಉಳಿದಂತೆ ಹಳ್ಳಿಗಳಲ್ಲಿ 10 ಗಂಟೆ ಕರೆಂಟ್ ಪೂರೈಕೆಯಾಗುತ್ತಿದೆ. ಉಳಿದ 14 ಗಂಟೆಗಳಲ್ಲಿ ಆರು ಗಂಟೆ 3 ಫೇಸ್ ಹಾಗೂ 4 ಗಂಟೆ 2 ಫೇಸ್ ವಿದ್ಯುತ್ ನೀಡಿ ಕಣ್ಣಾಮುಚ್ಚಾಲೆ ಆಟವಾಡಲಾಗುತ್ತಿದೆ.

ವಿದ್ಯುತ್ ಉತ್ಪಾದನೆ, ಪ್ರಸರಣ ಹೇಗೆ? ಮುಂದೆ ಓದಿ...

English summary
The unscheduled load shedding in many parts of Karnataka will continue to says BESCOM MD P Manivannan. Power Minister Shobha Karandlaje is blaming on delay in the import of power from other states. CM Sadananda Gowda assures no load shedding. Here is brief note on power production, storage and distribution in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X