ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಶಾಂತಿ ಪುರಸ್ಕಾರ ಸ್ಪರ್ಧೆಯಲ್ಲಿ ನಮ್ಮ ಎನ್ ಜಿಒ

By Mahesh
|
Google Oneindia Kannada News

Nobel peace prize Nomination 2012
ಬೆಂಗಳೂರು, ಫೆ.20: ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್(CWC) ನಾಮಾಂಕಿತಗೊಂಡಿದೆ.

ಗ್ರಾಮೀಣ ಭಾಗದಲ್ಲಿ ಮಕ್ಕಳ ಗ್ರಾಮ ಸಭೆ ಕಡ್ಡಾಯಗೊಳಿಸುವುದು, ಮಕ್ಕಳ ಹಕ್ಕು, ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಮಕ್ಕಳ ಪಾತ್ರ ಮುಂತಾದ ವಿಷಯಗಳ ಮೇಲೆ Concerned for Working Children (CWC) ಎನ್ ಜಿಒ ಕಾರ್ಯ ನಿರ್ವಹಿಸುತ್ತಿದೆ.

cwc ಜೊತೆಗೆ 'ಸೇವ್ ಚಿಲ್ಡ್ರನ್' ಹಾಗೂ ಅಮೆರಿಕದ ಮಕ್ಕಳ ನಿಧಿ ಸಂಸ್ಥೆಗಳು ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮಾಂಕಿತಗೊಂಡಿದೆ.

1985 ರಿಂದ ಮಕ್ಕಳ ಹಕ್ಕುಗಳಿಗೆ ದನಿಯಾಗುವ ಕಾರ್ಯದಲ್ಲಿ ನಮ್ಮ ಸಂಸ್ಥೆ ನಿರತವಾಗಿದೆ. ಸರ್ಕಾರ ಬಾಲ ಕಾರ್ಮಿಕರ ಕಾಯ್ದೆ ರೂಪಿಸುವ ಮೊದಲೇ ನಾವು ಮಕ್ಕಳ ಹಕ್ಕುಗಳ ಬಗ್ಗೆ ದನಿ ಎತ್ತಿದ್ದೆವು ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ.

ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡಿರುವುದು ಖುಷಿ ಕೊಟ್ಟಿದೆ. ನಮ್ಮ ಸಂಸ್ಥೆ ಬಗ್ಗೆ ನೊಬೆಲ್ ಸಮಿತಿಗೆ ತಿಳಿಸಿದ ನಾರ್ವೆ ಸಂಸದರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು cwc ಸ್ಥಾಪಕ, ನಿರ್ದೇಶಕಿ ನಂದನಾ ರೆಡ್ಡಿ ಅವರು ಹೇಳಿದ್ದಾರೆ.

ನಾರ್ವೆಯ ಸಂಸದರಾದ ಲಿಂಡಾ ಹೊಫ್ ಸ್ಟಡ್ ಹೆಲೆಲ್ಯಾಂಡ್, ಗನ್ ಕರಿನ್ ಜುಲ್ ಹಾಗೂ ಆಂಡ್ರೆ ಒಕ್ತೆ ದಹ್ಲ್ ಅವರು ಬೆಂಗಳೂರಿನ cwc ಸಂಸ್ಥೆಯನ್ನು ನೊಬೆಲ್ ಶಾಂತಿ ಪುರಸ್ಕಾರ 2012ಕ್ಕೆ ಶಿಫಾರಸು ಮಾಡಿದ್ದಾರೆ.

English summary
Bangalore NGO Concerned for Working Children (CWC) is among nominees for this years Nobel peace prize by Norwegian Parliamentarians. Nandana Reddy, founder and Director said CWC has emphasising on children's right to participate in decision-making and children's grama sabhas mandatory in rural local governments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X