ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.19ರಂದು ತಪ್ಪದೆ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ

By Prasad
|
Google Oneindia Kannada News

Pulse polio immunization campaign begins on Feb 19
ಬೆಂಗಳೂರು, ಫೆ. 18 : 2012ರ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಫೆಬ್ರವರಿ 19ರಂದು ಆರಂಭಗೊಳ್ಳುತ್ತಿದೆ. ಎರಡೇ ಎರಡು ಹನಿ ಮಗುವನ್ನು ಅಂಗವೈಕಲ್ಯತೆಯಿಂದ ಪಾರುಮಾಡಬಲ್ಲದು. ಆದ್ದರಿಂದ ಯಾವುದೇ ಹೆದರಿಕೆಯಿಲ್ಲದೆ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕು.

ಐದು ವರ್ಷದೊಳಗಿನ 74,59,152 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಉದ್ದೇಶ ಇಲಾಖೆ ಇಟ್ಟುಕೊಂಡಿದೆ. ಸಾವಿರಾರು ಕಾರ್ಯಕರ್ತರು ರಾಜ್ಯದಾದ್ಯಂತ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ತಲುಪಲು ಸಾಧ್ಯವಿಲ್ಲದ ಪ್ರದೇಶಗಳು ಹಾಗೂ ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲಿ ವಿಶೇಷ ಸಂಚಾರಿ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಮಣರೆಡ್ಡಿಯವರು ತಿಳಿಸಿದ್ದಾರೆ.

ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲು ವ್ಯವಸ್ಥಿತ ಪ್ರಚಾರ ಮಾಡಲಾಗುತ್ತಿದೆ. ಆಕಾಶವಾಣಿ, ದೂರದರ್ಶನ ಮತ್ತು ಇತರೆ ಖಾಸಗಿ ರೇಡಿಯೋ ಹಾಗೂ ಟಿವಿ ವಾಹಿನಿಗಳಲ್ಲಿ ಗಣ್ಯರ ಸಂದೇಶಗಳು, ನೇರ ಫೋನ್ ಇನ್ ಸಂದರ್ಶನ, ನಿರಂತರ ಪ್ರಕಟಣೆಗಳ ಮೂಲಕ ಪ್ರಚಾರ ಕಾರ್ಯ ಮಾಡಲಾಗುತ್ತದೆ. ಇದಲ್ಲದೆ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು, ಸ್ಥಳೀಯ ಸಂಸ್ಥೆಗಳು ರೋಟರಿ ಇಂಟರ್‌ನ್ಯಾಷನಲ್ ಸೇರಿದಂತೆ ಇತರ ಸ್ವಯಂ ಸೇವಾ ಸಂಸ್ಥೆಗಳು ಪಲ್ಸ್ ಪೊಲೀಯೋ ಲಸಿಕೆ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿವೆ.

ಮೊದಲನೇ ಹಂತದ ಪೋಲಿಯೋ ಲಸಿಕೆ ಆಂದೋಲನಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 8 ಗಂಟೆಗೆ ಆಯ್ದ ಕೆಲವು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿರುತ್ತಾರೆ.

ರಾಜ್ಯದಲ್ಲಿ 2007ರ ನವೆಂಬರ್ 3ರಂದು ರಾಯಚೂರಿನಲ್ಲಿ ವರದಿಯಾದ ಪೋಲಿಯೋ ಪ್ರಕರಣವೇ ಕೊನೆಯದು. ಅದೂ ಸಹ ವಲಸೆ ಕುಟುಂಬವೊಂದರಲ್ಲಿ ಕಂಡುಬಂದಿದ್ದು, ರಾಜ್ಯದವರಲ್ಲಿಯೇ ಕಂಡುಬಂದ ಪೋಲಿಯೋ ಪ್ರಕರಣ ವರದಿಯಾಗಿದ್ದು ಬೆಂಗಳೂರಿನ ಯಶವಂತಪುರದಲ್ಲಿ 2004ರಲ್ಲಿ.

English summary
First phase of pulse polio immunization campaign is beginning on February 19, Sunday all over Karnataka. Child below 5 years should be administered polio vaccination. Two drops of polio can save your child from polio virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X