ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮನಾಭ ದೇಗುಲದಡಿ 2 ಸುರಂಗ ಮಾರ್ಗ

By Srinath
|
Google Oneindia Kannada News

kerala-padmanabha-temple-security-tunnels-threat
ತಿರುವನಂತಪುರ, ಫೆ.17: ಕೇರಳದ ಅನಂತ ಪದ್ಮನಾಭ ಸ್ವಾಮಿ ದೇಗುಲ ಈಗ ಆತಂಕದ ಗೂಡಾಗಿದೆ. ಎಲ್ಲಿ ಯಾವಾಗ ಏನಾಗುವುದೋ ಎಂಬ ಆತಂಕವಿದೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿವೆ.
ತಿರುವಾಂಕೂರು ರಾಜಮನೆತನದ ಕೌದಿಯಾರ್ ಅರಮನೆ ಮತ್ತು ಅನಂತ ಪದ್ಮನಾಭ ಸ್ವಾಮಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಇದೆ. ಮತ್ತೊಂದೆಡೆ, ದೇಗುಲಕ್ಕೂ ಅರಬ್ಬಿ ಸಮುದ್ರಕ್ಕೂ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಇದೆ ಎನ್ನಲಾಗಿದೆ. ಇದು ನಿಜವೋ, ಸುಳ್ಳೊ ಎಂಬುದು ಬೇರೆ ಮಾತು. ಆದರೆ ಇದರಿಂದ ಅನಂತ ಸಂಪತ್ತು ಲೂಟಿಯಾಗುವುದಕ್ಕೆ ಅವಕಾಶ ಸಿಗದಂತೆ ಭದ್ರಪಡಿಸುವುದು ಸರಕಾರದ ಹೊಣೆಗಾರಿಕೆ.

ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಭೂ ವಿಜ್ಞಾನ ಅಧ್ಯಯನ ಸಂಸ್ಥೆಯ (CESS) ನೆರವನ್ನು ಪಡೆದು ಇಂತಹ ಸುರಂಗ ಮಾರ್ಗಗಳ ಬಗ್ಗೆ ಬೆಳಕು ಚೆಲ್ಲಲು ಕೋರಿತ್ತು. ಅದರಂತೆ CESS ತಂಡವೊಂದು ಪ್ರಾಥಮಿಕ ಅಧ್ಯಯನ ನಡೆಸಿ, ಇನ್ನೂ ಸವಿಸ್ತಾರವಾದ ಅಧ್ಯಯನ ನಡೆಸುವುದರ ಅಗತ್ಯವಿದೆ ಎಂದು ಹೇಳಿ ಕೈತೊಳೆದುಕೊಂಡಿದೆ. ಸರಕಾರವೂ 'ಹಣಕಾಸು ಖರ್ಚು' ಹೆಚ್ಚಾಗುವ ಭೀತಿಯಿಂದ CESS ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ. ಸರಕಾರ ಓಕೆ ಅಂದರೆ ನಾವು ತಕ್ಷಣ ಅಧ್ಯಯನ ಕೈಗೊಳ್ಳುತ್ತೇವೆ ಎಂದು CESS ತನ್ನ ಕಾಳಜಿ ವ್ಯಕ್ತಪಡಿಸಿದೆ.

ಮುಂದಿನ ಹಂತಗಳಲ್ಲಿ ನಿಜಕ್ಕೂ ಡಕಾಯಿತಿ ಭೀತಿ ಎದುರಾಗಿದ್ದೇ ಆದರೆ ಆಗ ಅಗತ್ಯವಾಗಿ ಅಂತಹ ಕ್ರಮಗಳನ್ನು ಕೈಗೊಂಡರಾಯಿತು ಎಂಬುದು ರಾಜ್ಯ ಗೃಹ ಸಚಿವಾಲಯದ ಲೆಕ್ಕಾಚಾರವಾಗಿದೆ.

English summary
A fear has been looming large at Sri Padmanabha Swami Temple at Thiruvananthapuram, Kerala that the temple remains vulnerable to underground robbery bids. As there is a belief that there are tunnels connecting the temple to the Kaudiar Palace of the Travancore royal family on the one side, and the Arabian Sea on the other which can lead to robbery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X