• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾದಗಿರಿ : ಕೃಷಿ ಇಲಾಖೆಯಿಂದ ರಾಷ್ಟ್ರಧ್ವಜಕ್ಕೆ ಅವಮಾನ

By * ಸಾಗರ ದೇಸಾಯಿ, ಯಾದಗಿರಿ
|

ಯಾದಗಿರಿ, ಫೆ. 17 : ಫೆ. 14ರಂದು ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನಿಧನರಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿತ್ತು. ಗೌರವ ಸೂಚಕವಾಗಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಶೋಕಾಚರಣೆ ಮಾಡಲಾಗಿತ್ತು. ಆದರೆ ಶೋಕಾಚರಣೆ ಫೆ.16ರಂದೇ ಮುಕ್ತಾಯವಾದರೂ ಯಾದಗಿರಿಯಲ್ಲಿ ಶುಕ್ರವಾರ ಕೂಡ ಅರ್ಧ ಇಳಿಸಿದ ರಾಷ್ಟ್ರಧ್ವಜ ಹಾರಾಡುತ್ತಿತ್ತು.

ಯಾದಗಿರಿಯ ಸಹಾಯಕ ಕೃಷಿ ಅಧಿಕಾರಿ ಕಾರ್ಯಲಯದ ಮುಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಧಕ್ಕೆ ರಾಷ್ಟ್ರಧ್ವಜ ಹಾರಾಡುತ್ತಿತ್ತು. ಮೂರು ದಿನಗಳ ಶೋಕಾಚರಣೆ ನಿನ್ನೆನೆ ಮುಕ್ತಾಯವಾಗಿತ್ತು. ಸಾರ್ವಜನಿಕರು ಈ ಸಂಗತಿಯನ್ನು ಸಹಾಯಕ ಕೃಷಿ ಅಧಿಕಾರಿ ರಾಜಣ್ಣ ಗಮನಕ್ಕೆ ತಂಗಾದ ಕಕ್ಕಾಬಿಕ್ಕಿಯಾದ ರಾಜಣ್ಣ ಸಿಬ್ಬಂದಿಗಳ ನೆರವಿನಿಂದ ರಾಷ್ಟ್ರಧ್ವಜವನ್ನು ಕಾಲಲ್ಲಿ ಚಪ್ಪಲಿ ಹಾಕಿಕೊಂಡೇ ಕೆಳಗೆ ಇಳಿಸಿದ್ದಾರೆ.

ರಾಷ್ಟ್ರಧ್ವಜವನ್ನು ಕೆಳಗೆ ಇಳಿಸುವಾಗ ಅದರದೆ ಆದ ಗೌರವ ಮತ್ತು ನೀತಿ ನಿಯಮಗಳು ಇರುತ್ತವೆ. ಆದರೆ, ಬೇಜವಬ್ದಾರಿ ಅಧಿಕಾರಿಗಳು ನಿಯಮಗಳನ್ನು ಪಾಲಿಸದೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇದು ಇಡೀ ನಾಗರಿಕ ಸಮುದಾಯ ತಲೆ ತಗಿಸುವಂತೆ ಮಾಡಿದೆ. ಇನ್ನು ಮುಂದಾದರೂ ಇಂತಹ ಅಚಾತುರ್ಯ ನಡೆಯದಂತೆ ನೋಡಿಕೊಳ್ಳಲಿ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National flag insulted in Yadgir by Assistant Director of Agriculture. After the death of VS Acharya the Karnataka govt had decided to mourn for 3 days, so the flag flown half mast for 3 days. But, it continued to fly half mast on 4th day too and was removed wearing footwear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more