ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬ್ಯಾಂಕ್ ಸಂಸ್ಥಾಪಕರ ದಿನ ಫೆ 18

By Srinath
|
Google Oneindia Kannada News

karnataka-bank-founders-day-mangalore
ಮಂಗಳೂರು, ಫೆ.17: ಕರ್ಣಾಟಕ ಬ್ಯಾಂಕ್ ಮಹತ್ವದ ಸಾಧನೆ ಮಾಡಿದ್ದು, 50 ಸಾವಿರ ಕೋಟಿ ರೂ. ವಹಿವಾಟಿನ ಮೈಲಿಗಲ್ಲನ್ನು ದಾಟಿ ಮುನ್ನುಗ್ಗುತ್ತಿದೆ. ಇದೇ ಸಂದರ್ಭದಲ್ಲಿ ನಾಳೆ (ಫೆ. 18) ಸಂಸ್ಥಾಪಕರ ದಿನ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. 88ನೇ ಸಂಸ್ಥಾಪಕರ ದಿನಾಚರಣೆಯನ್ನು ಮಹಾವೀರ ವೃತ್ತದಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದೆ.

ಆರ್ ಬಿಐ ಮಾಜಿ ಡೆಪ್ಯುಟಿ ಗವರ್ನರ್ ಉಷಾ ಥೊರಟ್ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬ್ಯಾಂಕಿಂಗ್ ಸ್ಥಿತಿಗತಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬ್ಯಾಂಕಿನ ಹಿಂದಿನ ಅಧ್ಯಕ್ಷ ಅನಂತಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ತನ್ನಿಮಿತ್ತ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಂ ಭಟ್‌ ಅವರು ಈ ಪ್ರಗತಿಗೆ ಕಾರಣರಾದ ಎಲ್ಲಾ ಗ್ರಾಹಕರಿಗೆ, ಷೇರುದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರೋತ್ಸಾಹ ನೀಡಿ ಸಹಕರಿಸಿದ ಹಿತೈಷಿಗಳನ್ನು ವಂದಿಸಿ, ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಆಡಳಿತ ಮಂಡಳಿಯನ್ನು ಅಭಿನಂದಿಸಿದ್ದಾರೆ. ಈ ಹಣಕಾಸು ವರ್ಷಾಂತ್ಯಕ್ಕೆ ವ್ಯವಹಾರದ ಗುರಿಯು 54 ಸಾವಿರ ಕೋಟಿ ರೂ.ಗೂ ಮಿಗಿಲಾಗಿದ್ದು, ಇದನ್ನು ಸಾಧಿಸಲು ತನ್ನ ಎಲ್ಲಾ ಸಿಬಂದಿ ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

English summary
Mangalore based Karnataka Bank whitch has crossed Rs. 50 K crore business is scheduled to Celebrate its Founders Day on Feb 18 at its head office near Mahaveera Circle in Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X