ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಬೇಡ: ಅಮೆರಿಕ ಕಂಪನಿಗಳಿಗೆ ಒಬಾಮ ತಾಕೀತು

By Srinath
|
Google Oneindia Kannada News

dont-depend-on-india-for-skilled-workers-obama
ವಾಷಿಂಗ್ಟನ್, ಫೆ.15: ಇಂಜಿನಿಯರಿಂಗ್, ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕುಶಲತೆ ಹೊಂದಿರುವ ಹಾಗೂ ಶಿಕ್ಷಿತ ಕಾರ್ಮಿಕರಿಗಾಗಿ ಭಾರತ ಮತ್ತು ಚೀನಾವನ್ನು ಅವಲಂಬಿಸಬೇಡಿ ಎಂದು ಅಮೆರಿಕದ ಕಂಪನಿಗಳಿಗೆ ಅಧ್ಯಕ್ಷ ಬರಾಕ್ ಒಬಾಮ ತಾಕೀತು ಮಾಡಿದ್ದಾರೆ.

ಕುಶಲ ಕಾರ್ಮಿಕರಿಗಾಗಿ ಭಾರತದಂತಹ ರಾಷ್ಟ್ರಗಳತ್ತ ಮುಖ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಅಮೆರಿಕದಲ್ಲೇ ತರಬೇತಿಗೊಳಿಸಬೇಕಾದ ಶಾಲೆ ಹಾಗೂ ಶಿಕ್ಷಕರನ್ನು ಒದಗಿಸಲು ತಾನು ಸಿದ್ಧ ಎಂದು ಅವರು ಭರವಸೆ ನೀಡಿದ್ದಾರೆ.

'ಉದ್ಯೋಗದಾತರು ಇಂದು ಅತಿ ಹೆಚ್ಚು ಕುಶಲತೆಯ ಹಾಗೂ ಶಿಕ್ಷಿತ ಕಾರ್ಮಿಕರನ್ನು ಎದುರು ನೋಡುತ್ತಿದ್ದಾರೆ. ಇಂತಹ ಕಾರ್ಮಿಕರಿಗಾಗಿ ಅವರು ಭಾರತ ಹಾಗೂ ಚೀನಾದಲ್ಲಿ ತಡಕಾಡುವುದನ್ನು ನಾನು ಅಪೇಕ್ಷಿಸುವುದಿಲ್ಲ. ಅಂತಹ ಕಾರ್ಮಿಕರನ್ನು ಉದ್ಯಮಗಳು ಇಲ್ಲಿ ಅಮೆರಿಕದಲ್ಲಿಯೇ ಕಂಡುಕೊಳ್ಳಬೇಕು' ಎಂದು ಒಬಾಮ ತಿಳಿಸಿದ್ದಾರೆ.

ಅಮೆರಿಕದಲ್ಲಿಯೇ ಉದ್ಯೋಗಗಳನ್ನು ಸೃಷ್ಟಿಸುವ ಕಂಪನಿಗಳಿಗೆ ತನ್ನ ಆಡಳಿತವು ಉತ್ತೇಜಕಗಳನ್ನು ನೀಡಲಿದೆ ಎಂದು ಕಳೆದ ಬಾರಿ ಸದನದಲ್ಲಿ ಮಾಡಿದ ಭಾಷಣದಲ್ಲಿ ಒಬಾಮ ತಿಳಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

English summary
US President Barack Obama has said that he does not want American companies to look for skilled and educated workers in India and China in fields like engineering, technology and science.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X