ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50000 ಕೋಟಿ $ ಕಾಳಧನ ವಾಪಸ್ ತರೋಕ್ಕಾಗಲ್ಲ

By Srinath
|
Google Oneindia Kannada News

500-bn-dollor-indian-black-money-foreign-banks-cbi
ಹೊಸದಿಲ್ಲಿ, ಫೆ.14: its official! ಭಾರತೀಯರು ವಿದೇಶಗಳಲ್ಲಿ ಠೇವಣಿ ಮಾಡಿರುವ ಕಾಳ ಧನದ ಒಟ್ಟು ಮೊತ್ತ ಅಂದಾಜು 50,000 ಕೋಟಿ ಯುಎಸ್‌ ಡಾಲರ್‌ (24.5 ಲಕ್ಷ ಕೋಟಿ ರೂ.) ದಾಟುತ್ತದೆ. ಹಾಗೆಯೇ. ವಿದೇಶಿ ಬ್ಯಾಂಕ್‌ಗಳಲ್ಲಿನ ಗರಿಷ್ಠ ಠೇವಣಿ ಮಾಡಿರುವುದೂ ಇದೇ ಭಾರತೀಯರು. ಇದರಿಂದ ಭಾರತಕ್ಕೆ ಹೆಚ್ಚಾಗಿ ಹಾನಿಯಾಗುತ್ತಿದೆ.

ಸಿಬಿಐ ನಿರ್ದೇಶಕ ಎಪಿ ಸಿಂಗ್‌ ಅವರು ಸೋಮವಾರ ಈ ಮಾಹಿತಿ ನೀಡಿದ್ದಾರೆ. ಕ್ರಿಮಿನಲ್‌ ಚಟುವಟಿಕೆಗಳು ಹಾಗೂ ತೆರಿಗೆ ತಪ್ಪಿಸುವಿಕೆಯಿಂದ ಗಡಿಯಾಚೆ ಹರಿದುಹೋಗುವ ಮೊತ್ತ ಸುಮಾರು 1.5 ಲಕ್ಷ ಕೋಟಿ ಯುಎಸ್‌ ಡಾಲರ್‌. ಇದರಲ್ಲಿ 4,000 ಕೋಟಿ ಯುಸ್‌ ಡಾಲರ್‌ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸರಕಾರಿ ನೌಕರರಿಗೆ ನೀಡುವ ಲಂಚವಾಗಿದೆಯೆಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ ಎಂದು ಸಿಂಗ್‌ ಹೇಳಿದರು. ಕಳೆದ 15 ವರ್ಷಗಳಲ್ಲಿ ಈ ಮೊತ್ತದಲ್ಲಿ ಕೇವಲ 500 ಕೋಟಿ ಯುಎಸ್‌ ಡಾಲರ್‌ಗಳನ್ನು ಮಾತ್ರ ಹಿಂದಕ್ಕೆ ತರಲಾಗಿದೆ ಎಂದವರು ವರದಿಯನ್ನು ಉಲ್ಲೇಖಿಸಿ ಹೇಳಿದರು.

ಕಾಳ ಧನ ವಾಪಸ್‌ ಕಷ್ಟ, ಕಷ್ಟ: ವಿದೇಶಿ ಬ್ಯಾಂಕುಗಳ ರಹಸ್ಯ ಖಾತೆಗಳಲ್ಲಿ ಸಂಗ್ರಹಿಸಲಾಗಿರುವ ಲಕ್ಷಾಂತರ ಕೋಟಿ ರೂ. ಕಾಳಧನವನ್ನು ವಾಪಸ್‌ ತರಲು ಸರಕಾರಕ್ಕೆ ಕಷ್ಟ, ಕಷ್ಟ. ಏಕೆಂದರೆ, ಭಾರತೀಯರು ಕಾಳ ಧನವನ್ನು ಕೂಡಿಟ್ಟಿರುವ ಬ್ಯಾಂಕುಗಳಿರುವ ರಾಷ್ಟ್ರಗಳಲ್ಲಿನ ರಾಜಕೀಯ ಇಚ್ಛಾಶಕ್ತಿ ಪ್ರೋತ್ಸಾಹದಾಯಕವಾಗಿಲ್ಲ. ನಮ್ಮ ಕೈಗಳನ್ನು ಕಾನೂನುಗಳು ಕಟ್ಟಿ ಹಾಕಿವೆ ಎಂದು ಈ ರಾಷ್ಟ್ರಗಳು ಹೇಳುತ್ತಿವೆ. ಹೀಗಾಗಿ ಕಾಳ ಧನವನ್ನು ವಾಪಸ್‌ ತರಲು ಸರಕಾರಕ್ಕೆ ಕಷ್ಟವಾಗುತ್ತಿದೆ ಎಂದು ಪ್ರಧಾನಿ ಕಚೇರಿಯ ಸಹಾಯಕ ಸಚಿವ ವಿ. ನಾರಾಯಣಸ್ವಾಮಿ ಹೇಳಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಸುವುದಕ್ಕಾಗಿ ಸಂಪತ್ತನ್ನು ತೆರಿಗೆದಾರರ ಸ್ವರ್ಗವೆನಿಸಿರುವ ರಾಷ್ಟ್ರಗಳಲ್ಲಿ ಜಮಾ ಮಾಡಲು ಭೀತಿವಾದಿ ಸಂಘಟನೆಗಳು ವಿನೂತನ ಎಲೆಕ್ಟ್ರಾನಿಕ್‌ ವಿಧಾನಗಳನ್ನು ಬಳಸುತ್ತಿರುವುದರಿಂದ ಕಾಳ ಧನ ನಿಗ್ರಹ ಪ್ರಶ್ನೆ ಮಹತ್ವದ್ದೆನಿಸಿದೆ ಎಂದವರು ನುಡಿದರು.

English summary
For the first time, a top government official has put a figure to unaccounted money stashed by Indians abroad. Central Bureau of Investigation (CBI) director A P Singh on Monday (Feb 13) said it was estimated Indians had stashed about $500 billion in tax havens abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X