ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಅಸೆಂಬ್ಲಿಯಲ್ಲಿ ಮೊಬೈಲ್ ನಿಷೇಧ?

By Mahesh
|
Google Oneindia Kannada News

TN Assembly to ban mobile phones
ಚೆನ್ನೈ, ಫೆ.12: ಕರ್ನಾಟಕ ಬಿಜೆಪಿ ಸಚಿವತ್ರಯರ ಅಶ್ಲೀಲ ವಿಡಿಯೋ ವೀಕ್ಷಣೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪಕ್ಕದ ರಾಜ್ಯ ಹೊಸ ನಿಯಮವನ್ನು ಹೊರತರುತ್ತಿದೆ. ತಮಿಳುನಾಡು ವಿಧಾನಮಂಡಲದಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಮಾಧ್ಯಮಗಳ ವರದಿ ಹೇಳುತ್ತದೆ.

ಕರ್ನಾಟಕ ಅಸೆಂಬ್ಲಿಯಲ್ಲಿ ನಡೆದ ಅಸಹ್ಯಕರ ಘಟನೆ ತಮಿಳುನಾಡು ಅಸೆಂಬ್ಲಿಯಲ್ಲಿ ನಡೆಯದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಜಯಲಲಿತಾ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಡಿಎಂಕೆ ನಾಯಕ ಟಿಆರ್ ಬಾಲು ಅವರ ಪುತ್ರ ಟಿಆರ್ ಬಿ ರಾಜ ಅವರು ವಿಧಾನಮಂಡಲ ಅಧಿವೇಶನವನ್ನು ಮೊಬೈಲ್ ಮೂಲಕ ಚಿತ್ರೀಕರಿಸಲು ಯತ್ನಿಸಿದ್ದರು. ಈ ಘಟನೆ ನಂತರ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.

ಕಾನೂನಿನ ಪ್ರಕಾರ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ. ಆದರೆ, ಸದನದೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬಹುದಾಗಿದೆ. ಜಯಲಲಿತಾ ಸರ್ಕಾರ ಕೈಗೊಂಡಿರುವ ಕ್ರಮ ಇನ್ನೂ ಕರ್ನಾಟಕದ ಬಿಜೆಪಿ ಗಮನಕ್ಕೆ ಬಂದಿಲ್ಲ. ಸಚಿವತ್ರಯದ ಪರ ವಿರೋಧ ಹೇಳಿಕೆ, ತನಿಖೆಯಲ್ಲಿ ಸದಾನಂದ ಗೌಡರ ಸರ್ಕಾರ ಮುಳುಗಿದೆ.

English summary
Tamil Nadu assembly soon will ban all mobile phones withing its premise of the House during its procedures. Media reports on Sunday, Feb 12 claimed that new rules will be drafted soon to bar all ministers and MLAs from carrying cell phones
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X