ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಆರೋಗ್ಯದಲ್ಲಿ ಏರುಪೇರು; 2 ದಿನ ಬೆಡ್ ರೆಸ್ಟ್

By Rajendra
|
Google Oneindia Kannada News

Sadananda Gowda
ಬೆಂಗಳೂರು, ಫೆ.11: ಅತಿಯಾದ ಕೆಲಸದ ಒತ್ತಡ ಹಾಗೂ ಹವಾಮಾನ ಬದಲಾವಣೆಯಿಂದ ಮುಖ್ಯಮಂತ್ರಿ ಸದಾನಂದಗೌಡ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಶುಕ್ರವಾರ (ಫೆ.10) ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಶೀತಜ್ವರದಿಂದ ಸಿಎಂ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸಿಎಂರನ್ನು ಪರೀಕ್ಷಿಸಿದ ವೈದ್ಯರು ಎರಡು ದಿನ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಶನಿವಾರ (ಫೆ.11) ಹಾಗೂ ಭಾನುವಾರದ (ಫೆ.12) ಸಿಎಂ ಕಾರ್ಯಕ್ರಮಗಳು ರದ್ದಾಗಿವೆ. ಅನಾರೋಗ್ಯದ ನಡುವೆಯೂ ಶುಕ್ರವಾರ ಸಿಎಂ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ಬೌರಿಂಗ್ ಆಸ್ಪತ್ರೆ ವೈದ್ಯರಾದ ಡಾ. ಸತೀಶ್ ಚಂದ್ರ ಹಾಗೂ ಡಾ.ರವಿ ಅವರು ಸಿಎಂರ ಆರೋಗ್ಯ ತಪಾಸಣೆ ಮಾಡಿ ಹೊಟ್ಟೆ ಭಾಗದ ಸಿಟಿ ಸ್ಕ್ಯಾನಿಂಗ್ ಮಾಡಿದರು. ಸೂಕ್ತ ಔಷದೋಪಚಾರ ನೀಡಿ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. (ಏಜೆನ್ಸೀಸ್)

English summary
Karnataka Chief Minister Sadananda Gowda not feeling well. He has admited Bowring Hospital on Feb 10th Friday. Doctors are advised him to take two days bed rest. CM's all programmes on Saturday and Sunday are cancelled. ಸಿಎಂ ಆರೋಗ್ಯದಲ್ಲಿ ಏರುಪೇರು; 2 ದಿನ ಬೆಡ್ ರೆಸ್ಟ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X