ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q3: ಶುಭ್ ಜ್ಯುವೆಲ್ಲರಿಗೆ 114.7ಕೋಟಿ ರು ನಿವ್ವಳ ಲಾಭ

By Mahesh
|
Google Oneindia Kannada News

Shubh Jewellers Profit
ಬೆಂಗಳೂರು, ಜ.12: ರಾಜೇಶ್ ಎಕ್ಸ್ ಪೋರ್ಟ್ ಲಿ(ಆರ್ ಇಎಲ್) ಸಂಸ್ಥೆಯ ರೀಟೈಲ್ ಉತ್ಪನ್ನವಾದ ಶುಭ್ ಜ್ಯುವೆಲ್ಲರಿಸ್, ಹಬ್ಬದ ಸಂದರ್ಭದಲ್ಲಿ ಸುಮಾರು ಶೇ 232 ರಷ್ಟು ಆದಾಯ ಗಳಿಸಿ ಭರ್ಜರಿ ವ್ಯಾಪಾರ ನಡೆಸಿದೆ. ಇದರ ಪರಿಣಾಮ ಡಿ.31, 2011ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ ಶೇ.51ರಷ್ಟು ಅಥವಾ 114.7ಕೋಟಿ ರು ಲಾಭ ಗಳಿಸಿದೆ.

ಕಳೆದ ವರ್ಷದ ವರಮಾನಕ್ಕೆ ಹೋಲಿಸಿದರೆ ಇದೊಂದು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ ಹೇಳಿದ್ದಾರೆ. ರಫ್ತು ಹೆಚ್ಚಳ ಮತ್ತು ಚಿನ್ನಾಭರಣಗಳ ಚಿಲ್ಲರೆ ವಹಿವಾಟಿನಲ್ಲಿನ ಹೆಚ್ಚಳದಿಂದ ದಾಖಲೆ ಪ್ರಮಾಣ ವಹಿವಾಟು ಸಾಧಿಸಲಾಗಿದೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಮಾರಾಟ ಮೌಲ್ಯ ಶೇ 26ರಷ್ಟು ಜಿಗಿತ ಕಂಡಿದ್ದು 6,518 ಕೋಟಿ ರು.ನಷ್ಟು ವಹಿವಾಟು ನಡೆದಿದೆ.

ರಾಜ್ಯದಲ್ಲಿನ 70 ಶುಭ್ ಮಳಿಗೆಗಳಲ್ಲಿ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಕರ್ನಾಟಕ ಇನ್ನೂ 55 ರೀಟೈಲ್ ಮಳಿಗೆಗಳನ್ನು ಆರಂಭಿಸಲಾಗುವುದು. 2014ರ ಸುಮಾರಿಗೆ ದಕ್ಷಿಣ ಭಾರತದಲ್ಲಿ 500 ಮಳಿಗೆಗಳನ್ನು ಹೊಂದಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.

English summary
Shubh Jewellers, the retail brand of Rajesh Exports Limited (REL), has posted record increase of 223pc over sales retail sales during the Diwali and Christmas. REL has created 2000 new designs for the oncoming wedding season. 51 per cent rise in net profit at Rs 114.7 crore for the third quarter-ended December 31, 2011, with 6518 Cr profit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X