ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಜಾಮರ್ಸ್ ಕೈಕೊಟ್ಟಿದ್ದೆ ಕಾರಣ!

By Mahesh
|
Google Oneindia Kannada News

No Mobile Phone Jammers Vidhana Soudha
ಬೆಂಗಳೂರು, ಫೆ.8: ಮಾಜಿ ಸಚಿವ ಲಕ್ಷ್ಮಣ ಸವದಿ ಹಾಗೂ ಸಿಸಿ ಪಾಟೀಲರ ಡರ್ಟಿ ಪಿಕ್ಚರ್ ವೀಕ್ಷಣೆ ನಂತರ ಸದನದಲ್ಲಿ ಮೊಬೈಲ್ ಫೋನ್ ನಿಷೇಧದ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಸ್ಪೀಕರ್ ಬೋಪಯ್ಯ ಹೇಳಿದ್ದಾರೆ.

ಆದರೆ, ಸದನದ ಕಲಾಪದ ವೇಳೆ ಮೊಬೈಲ್ ಬಳಕೆ ನಿಯಂತ್ರಿಸಲು ಹಾಕಿದ್ದ ಮೊಬೈಲ್ ಜಾಮರ್ ಗಳು ಎಲ್ಲಿ? ಸವದಿ ಎಂಎಂಎಸ್ ನೋಡಿದ್ದು ಚಿತ್ರೀಕರಣವಾಗಿದ್ದು ಹೇಗೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಮೊಬೈಲ್ ಜಾಮರ್ಸ್ ಕೆಟ್ಟುಹೋಗಿ ಸುಮಾರು ದಿನಗಳು ಕಳೆದಿದ್ದರೂ ರಿಪೇರಿ ಮಾಡಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಂಶ ಸವದಿಗೆ ಗೊತ್ತಿತ್ತೋ ಇಲ್ಲವೋ ಅದರೆ, ಅದರ ಲಾಭ ಪಡೆದು ನೀಲಿ ಚಿತ್ರ ವೀಕ್ಷಿಸಿದ್ದಾರೆ.

ಜಾಮರ್ಸ್ ಬಳಸಿ 9 ಮೀಟರ್ ವ್ಯಾಪ್ತಿಯಿಂದ 9 ಕಿ.ಮೀ ತನಕ ಮೊಬೈಲ್ ಬಳಕೆ ನಿರ್ಬಂಧಿಸಬಹುದು. ಜಿಎಸ್ ಎಂ, ಸಿಡಿಎಂಎ, iDEN ಮುಂತಾದ ಎಲ್ಲಾ ನೆಟ್ವರ್ಕ್ ಗಳನ್ನು ಬ್ಲಾಕ್ ಮಾಡಬಹುದು.

ಆದರೆ, ಸುಧಾರಿತ ಉನ್ನತ ತಂತ್ರಜ್ಞಾನವುಳ್ಳ ಸ್ಮಾರ್ಟ್ ಫೋನ್ ಗಳನ್ನು ನಿರ್ಬಂಧಿಸುವಲ್ಲಿ ಕೆಲವೊಮ್ಮೆ ಜಾಮರ್ ಗಳು ಸೋಲುತ್ತದೆ. ಫಿಕ್ವೆನ್ಸಿ ಸರಿಯಾಗಿ ಹೊಂದಿಸದಿದ್ದರೆ ಜಾಮರ್ ಇದ್ದರೂ ಮೊಬೈಲ್ ಕಾರ್ಯ ನಿರ್ವಹಿಸುವ ಉದಾಹರಣೆಗಳಿದೆ.

ಭಾರತದಲ್ಲಿ ಕೋರ್ಟ್, ಸರ್ಕಾರಿ ಕಚೇರಿ, ಧಾರ್ಮಿಕ ಕೇಂದ್ರ, ಜೈಲು ಹಾಗೂ ಶಿಕ್ಷಣ ಸಂಸ್ತೆಗಳಲ್ಲಿ ಜಾಮರ್ ಗಳನ್ನು ಬಳಸಲಾಗುತ್ತಿದೆ.

ಪತ್ರಿಕೆಗೆ ನಿರ್ಬಂಧ, ಮೊಬೈಲ್ ಗೆ ಇಲ್ಲ: ಜಾಮರ್ ಗಳು ಇಲ್ಲದ ಕಾರಣ ಶಾಸಕರು ಮೊಬೈಲ್ ಬಳಸುತ್ತಲೇ ಇದ್ದಾರೆ. ವಿಧಾನಸಭಾ ವ್ಯವಹಾರಗಳ ನಿಯಮಾವಳಿ ಸೆಕ್ಷನ್ 324 ಪ್ರಕಾರ ಸದಸ್ಯರು ಸದನದಲ್ಲಿ ಪತ್ರಿಕೆಯನ್ನು ಓದುವುದೂ ನಿಷಿದ್ಧ.

ಸವದಿ ಮತ್ತು ಪಾಟೀಲ್ ಮೊಬೈಲ್ ಫೋನ್‌ಗಳಲ್ಲಿ ಏನನ್ನೂ ವೀಕ್ಷಿಸುತ್ತಿದ್ದುದನ್ನು ಸದನದ ಕಲಾಪ ರೆಕಾರ್ಡ್ ಮಾಡುವ ಮಾಧ್ಯಮದ ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಇಬ್ಬರು ಸಚಿವರೂ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದುದು ಕಂಡು ಬಂದಾಗ ಜೂಮ್ ಮಾಡಿ ನೋಡಿದ್ದಾರೆ.

ಸದನದ ಒಳಗೆ ಯಾವುದೇ ವಿಡಿಯೋ ಅಥವಾ ಛಾಯಾಚಿತ್ರವನ್ನು ನಿಷೇಧಿಸಲಾಗಿದೆ.ಆದರೆ, ವೀಕ್ಷಕರ ಗ್ಯಾಲರಿಯಲ್ಲಿ ಕೂತ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡುವ ಸಾಧ್ಯತೆಯೂ ಇದೆ. ಮೂವರು ಬಿಜೆಪಿ ಸಚಿವರ ತಲೆದಂಡಕ್ಕೆ ಕಾರಣನಾದ ಛಾಯಾಗ್ರಹಕ ಯಾರೂ ಎಂದು ಇನ್ನೂ ತಿಳಿದುಬಂದಿಲ್ಲ. ಟಿವಿ ಮಾಧ್ಯಮಗಳು ಕೂಡಾ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

English summary
Due to the technical snag former minister Lakshman Savidi was able to watch dirty picture in Mobile phone during the assembly Session. According to sources Mobile jammers are not working in Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X