ಬೆಂಗಳೂರಿನಲ್ಲಿ ರಾಬಿನ್ ಶರ್ಮ ಉಪನ್ಯಾಸ
Lead Without A Title ಎಂಬ ಹೆಸರಿನ ಕಾರ್ಯಕ್ರಮವನ್ನು ಫೆ.29ರಂದು ತಾಜ್ ವಿವಂತಾ, ಯಶವಂತಪುರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ರಿಂದ 12ರವರೆಗೂ ಕಾರ್ಯಕ್ರಮ ನಂತರ ಭೋಜನ ಏರ್ಪಡಿಸಲಾಗಿದೆ.
ಅತಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಉದ್ಯಮಿಗಳಾಗುವ ಕನಸು ಹೊತ್ತಿರುವ ಗ್ರಾಮೀಣ ಪ್ರತಿಭೆಗಳಿಗೆ ಆನ್ ಲೈನ್ ಕಿರು ಸಾಲ ಒದಗಿಸುವ ವೇದಿಕೆಯನ್ನು ಪ್ರಪ್ರಥಮಬಾರಿಗೆ ರಂಗ್ ದೇ ಸಂಸ್ಥೆ ಕಲ್ಪಿಸಿದೆ. 2008ರಲ್ಲಿ ಆರಂಭವಾದ ಈ ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 13 ರಾಜ್ಯಗಳ 12500 ಸಣ್ಣ ಪ್ರಮಾಣದ ಉದ್ಯಮಿಗಳಿಗೆ 6.4 ಕೋಟಿ ರು ತನಕ ಸಹಾಯ ಹಸ್ತ ನೀಡಿದೆ.
ಯಾರು ಬೇಕಾದರೂ ನಾಯಕರಾಗಬಹುದು ಎಂಬುದನ್ನು ತೋರಿಸಿಕೊಟ್ಟಿರುವ ಲೇಖಕ ರಾಬಿನ್ ಶರ್ಮ ಅವರ ವ್ಯಕ್ತಿತ್ವ ವಿಕಸನ ಪುಸ್ತಕಗಳ ಬಗ್ಗೆ ಪೀಠಿಕೆ ಅಗತ್ಯವಿಲ್ಲ. ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಶ್ರೇಣಿಯ ಪುಸ್ತಕಗಳನ್ನ್ ರಾಬಿನ್ ಶರ್ಮ ಅವರ ಪುಸ್ತಕಗಳು ಸೇರಿದೆ.
'ದ ಮಾಂಕ್ ವು ಸೋಲ್ಡ್ ಇಸ್ ಫೆರಾರಿ' ಸೇರಿದಂತೆ ಸುಮಾರು 11 ಕೃತಿಗಳನ್ನು ರಚಿಸಿದ್ದು ಎಲ್ಲವೂ ಜನಪ್ರಿಯತೆ ಗಳಿಸಿದೆ. ದ ಗ್ರೇಟ್ ನೆಸ್ ಗೈಡ್, ದ ಲೀಡರ್ ವು ಹಾಡ್ ನೋ ಟೈಟಲ್: ಅ ಮಾರ್ಡನ್ ಫ್ಯಾಬಲ್ ಆನ್ ರಿಯಲ್ ಸಕ್ಸಸ್ ಇನ್ ಬಿಸಿನೆಸ್ ಅಂಡ್ ಇನ್ ಲೈಫ್' ಮುಂತಾದ ಕೃತಿಗಳು ಪ್ರಸಿದ್ಧಿ ಹೊಂದಿದೆ.
Lead without title ಎಂಬ ಧ್ಯೇಯದ ಮೂಲಕ ಸಣ್ಣ ಪ್ರಮಾಣದ ಸಂಸ್ಥೆಗಳಿಗೆ ಸಲಹೆ ಸೂಚನೆಗಳನ್ನು ನೀಡುವ ದೊಡ್ಡ್ ಪ್ರಮಾಣದ ಸಂಸ್ಥೆಯಾಗಿ ರಾಬಿನ್ ಶರ್ಮ ಅವರ ಲೀಡರ್ ಶಿಪ್ ಇಂಟರ್ ನ್ಯಾಷನಲ್ ಸಂಸ್ಥೆ ಬೆಳೆದಿದೆ.
ವೃತ್ತಿ ಜೀವನ ಹಾಗೂ ಖಾಸಗಿ ಜೀವನದಲ್ಲಿ ಸರ್ವಾಂಗೀಣ ಏಳಿಗೆ ಕಾಣಲು ಶರ್ಮ ಅವರ ಉಪನ್ಯಾಸ ಹಾಗೂ ಪುಸ್ತಕಗಳು ಸಹಕಾರಿಯಾಗಿದೆ. ಇದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ರಂಗ್ ದೇ ಸಂಸ್ಥೆ ರಾಬಿನ್ ಶರ್ಮ್ ಅವರ ಮೂಲಕ ಕಿರುಸಾಲ ಯೋಜನೆ ಹಾಗೂ ಗ್ರಾಮೀಣ ಭಾಗದ ಯುವ ಉದ್ಯಮಿಗಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮ ರೂಪಿಸಿದೆ.
Passes are available on
For more information on 'Lead Without A Title,"
contact:
Aditi: 9591527628 , aditi@rangde.org
Smita: 9686114608, smita@rangde.org