ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಗುಪ್ಪ ಬಿಜೆಪಿ ಶಾಸಕನ ಮೇಲೆ ಲೋಕಾಯುಕ್ತ ತನಿಖೆ

By Mahesh
|
Google Oneindia Kannada News

Probe against BJP MLA Somalingappa
ಬೆಂಗಳೂರು, ಫೆ.6: ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಶಿರಗುಪ್ಪ ಬಿಜೆಪಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ಸೂಚಿಸಿದ್ದಾರೆ.

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ಸುಧೀಂದ್ರರಾವ್ ಅವರು ಸೋಮವಾರ ಆದೇಶಿಸಿದ್ದಾರೆ.

ವಿಧಾನಸಭೆಗೆ ಶಿರಗುಪ್ಪಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಶಾಸಕ ಸೋಮಲಿಂಗಪ್ಪ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಶಿರಗುಪ್ಪದ ನಿವಾಸಿ ಉಪನ್ಯಾಸಕ ಬಿ.ಈರಣ್ಣ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದಾಖಲಿಸಿದ್ದರು.

ಸಿಆರ್‌ಪಿಸಿ ಕಲಂ 156(3) ಅಡಿಯಲ್ಲಿ ಸೋಮಲಿಂಗಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿ,
ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಿದರು. ಅಲ್ಲದೆ ಮಾ.12ರಂದು ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಧೀಕ್ಷಕರಿಗೆ ಕೋರ್ಟ್ ಆದೇಶ ನೀಡಿದೆ.

ಸೋಮಲಿಂಗಪ್ಪ ಮಾಡಿದ ಆಸ್ತಿ ಎಷ್ಟು..?

English summary
The Lokayukta Court Monday(Feb.6) ordered a probe by the Lokayukta Superintendent of Police into the private complaint against a Siraguppa BJP MLA M.S. Somalingappa for allegedly possessing assets disproportionate to his known sources of income. Judge NK Sudhindra Rao directed the SP Lokayukta to submit his report by March 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X