ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಲೋಕಪೀಠ ಬೇಡವೆಂದ ಬನ್ನೂರಮಠ

By Srinath
|
Google Oneindia Kannada News

ಬೆಂಗಳೂರು, ಫೆ.7: ನಿರೀಕ್ಷೆಯಂತೆ ಹಿರಿಯ ನ್ಯಾಯಮೂರ್ತಿ ಬನ್ನೂರುಮಠ ಅವರು ಲೋಕಾಯುಕ್ತ ಪೀಠ ಏರುವುದರಿಂದ ಹಿಂದೆ ಸರಿದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸದಾನಂದಗೌಡರಿಗೆ ಸೋಮವಾರ ಪತ್ರ ಬರೆದಿರುವ ಅವರು 'ನಾನು ಲೋಕಾಯುಕ್ತ ಸ್ಥಾನವನ್ನು ನಿರಾಕರಿಸುತ್ತಿದ್ದು, ಆ ಹುದ್ದೆಗೆ ನನ್ನನ್ನು ಆಯ್ಕೆ ಮಾಡುವುದು ಬೇಡ' ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್ಆರ್ ಬನ್ನೂರಮಠ ಅವರು ಲೋಕಪೀಠ ತಿರಸ್ಕರಿಸುತ್ತಿದ್ದಂತೆ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಐದು ತಿಂಗಳ ಹಿಂದೆ ಕಳುಹಿಸಿದ್ದ ಪ್ರಸ್ತಾವವನ್ನು ರಾಜ್ಯಪಾಲ ಭಾರದ್ವಾಜ್ ಅವರು ತಿರಸ್ಕರಿಸಿದ್ದಾರೆ. ಸೋಮವಾರ ರಾತ್ರಿ ಏಳು ಗಂಟೆಯ ಸುಮಾರಿಗೆ ಈ ಸಂಬಂಧದ ಕಡತವನ್ನು ರಾಜಭವನದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಗೆ ವಾಪಸ್ ಕಳುಹಿಸಲಾಗಿದೆ.

ಆದರೆ ಕಳಂಕಿತ ನ್ಯಾ ಬನ್ನೂರುಮಠ ಅವರು ಲೋಕಾಯುಕ್ತ ಪೀಠ ತಿರಸ್ಕರಿಸಲು ಇಷ್ಟೊಂದು ತಡಮಾಡಿದ್ದೇಕೆ ಎಂದು ರಾಜಭವನದ ಗೋಡೆಗಳು ಕೇಳುತ್ತಿವೆ. ಇದಕ್ಕೆ ಉತ್ತರ ನೀಡುವ ಸಲುವಾಗಿ ನ್ಯಾ ಬನ್ನೂರುಮಠ ಅವರು ಇಂದು 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಅಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಪ್ರಕಟಿಸಿದ್ದಾರೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಕ್ಟೋಬರ್ ತಿಂಗಳಲ್ಲಿ ರಾಜ್ಯಪಾಲರಿಗೆ ಪ್ರಸ್ತಾವವೊಂದನ್ನು ಕಳುಹಿಸಿದ್ದ ರಾಜ್ಯ ಸರ್ಕಾರ, ಬನ್ನೂರಮಠ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಕೋರಿತ್ತು. ಆದರೆ, ಬನ್ನೂರಮಠ ಅವರು ಕಳಂಕಿತರು ಎಂದು ರಾಜ್ಯಪಾಲರು, ಅದನ್ನು ತಡೆ ಹಿಡಿದಿದ್ದರು.

English summary
Justice SR Bannur Matt has written a letter to CM Sadanada Gowda on Feb 6, stating he is withdrawing from the appointment of Karnataka Lokayukta post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X