ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕುದುರೆ ರೇಸಿಂಗ್ ಬುಕ್ಕಿಗಳ ಮೇಲೆ ಐಟಿ ದಾಳಿ

By Prasad
|
Google Oneindia Kannada News

IT raid on Racecourse bookies
ಬೆಂಗಳೂರು, ಫೆ. 6 : ಕ್ರಿಕೆಟ್ ಬೆಟ್ಟಿಂಗ್‌ನಂತೆಯೇ ಕುದುರೆಯ ರೇಸಿಂಗ್‌ನಲ್ಲಿಯೂ ಬೆಟ್ಟಿಂಗ್ ನಡೆಸಿ ಅಕ್ರಮವಾಗಿ ಹಣ ಗಳಿಸಿ ತೆರಿಗೆ ವಂಚಿಸಿದ ಆರೋಪದ ಮೇಲೆ ಹಲವಾರು ಬುಕ್ಕಿಗಳ ಮೇಲೆ ತೆರಿಗೆ ಅಧಿಕಾರಿಗಳ ಬೃಹತ್ ತಂಡ ಸೋಮವಾರ ಬೆಳಗಿನ ಜಾವ ದಾಳಿ ಮಾಡಿದೆ.

ಸೋಮವಾರ ಬೆಳಿಗ್ಗೆ 5.30 ಗಂಟೆಗೇ 150 ಆದಾಯ ತೆರಿಗೆ ಅಧಿಕಾರಿಗಳ 15 ತಂಡ ಬುಕ್ಕಿಗಳು ವಾಸವಿರುವ ಮನೆಗಳ ಮೇಲೆ ಹಠಾತ್ತಾಗಿ ದಾಳಿ ಮಾಡಿದೆ. ರೇಸ್‌ಕೋರ್ಸ್ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪಕ್ಕದಲ್ಲಿರುವ ಎರಡು ಅಪಾರ್ಟ್‌ಮೆಂಟ್ ಮತ್ತು ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ 1 ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಲಾಗಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಗರದ ಇನ್ನೂ ಹಲವಾರು ಕಡೆ ಏಕಕಾಲದಲ್ಲಿ ಬುಕ್ಕಿಗಳ ಮೇಲೆ ಐಟಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ದಾಳಿ ಇಂದು ಇಡೀ ದಿನ ನಡೆಯುವ ಸಾಧ್ಯತೆಯಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

English summary
Income tax department sleuths raid on racecourse bookies in Bangalore. 150 officials in 15 teams raided the apartments near Karnataka Film Chamber of Commerce and on Cunningham road on 6th February, 2012 early morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X