ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ವಿರುದ್ಧ ರೈತ ಸಂಘ ಆಕ್ರೋಶ

By Mahesh
|
Google Oneindia Kannada News

KS Puttannaiah on HDK
ಮಂಡ್ಯ, ಫೆ. 5: ರಾಜ್ಯ ರೈತಸಂಘದ ಬಗ್ಗೆ ಮತ್ತೆ ಕುಹಕವಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ರೈತಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಹೋರಾಟಕ್ಕೆ ಮೀಸಲಾಗಿರುವ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ರಾಜ್ಯದ ಜನರಿಗೆ ವಂಚನೆ, ಮೋಸ ವಾಡಿರುವ ದೇವೇಗೌಡರ ಕುಟುಂಬದವರ ಜತೆ ಚರ್ಚೆ ಅಗತ್ಯವಿಲ್ಲವೆಂದಿದೆ.

ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ರೈತಸಂಘದ ಪತ್ರಿಕಾ ಕಾರ್ಯದರ್ಶಿ ಕುದುರಗುಂಡಿ ನಾಗರಾಜು, ಪುಟ್ಟಣ್ಣಯ್ಯ ಅವರು ರೈತಸಂಘಟನೆಗೆ ಬರುವ ಮುನ್ನ ಹೊಂದಿದ್ದ ಆಸ್ತಿ ಎಷ್ಟು, ಈಗ ಇರುವ ಆಸ್ತಿ ಎಷ್ಟು ಎಂಬುದನ್ನು ತನಿಖೆಗೆ ಒಳಪಡಿಸಲಿ ಎಂದಿದ್ದಾರೆ. ಹಾಗೆಯೇ ಇನ್ನು ಮುಂದೆ ರೈತಸಂಘದ ಬಗ್ಗೆ ಮಾತನಾಡಿದರೆ ಕುಮಾರಸ್ವಾಮಿ, ಸಭೆ-ಸಮಾರಂಭಗಳಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಬ್ಬಿನ ದರ ನಿಗದಿಗೆ ರೈತಸಂಘ ಹೋರಾಟ ನಡೆಸಿದ ಕಾರಣಕ್ಕೆ ರೈತರು ಸ್ವಇಚ್ಚೆಯಿಂದ ರೈತಸಂಘಕ್ಕೆ ಟನ್‌ವೊಂದಕ್ಕೆ 1, 2 ರೂ.ಕೊಟ್ಟಿದ್ದಾರೆ. ಆ ಹಣ ರೈತ ಮುಖಂಡರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಡಲಾಗಿದೆ. ಇದರಿಂದ ಬರುವ ಬಡ್ಡಿ ಹಣದಿಂದ ರೈತಪರ ಹೋರಾಟಕ್ಕೆ ಬಳಕೆಯಾಗುತ್ತಿದೆ. ಹಣದ ದುರುಪೋಗವಾಗಿಲ್ಲ ಎಂದು ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

English summary
JDS stare president HD Kumaraswamy is having Swiss Bank account and he has dumped all his black money. Kumaraswamy has no rites to comment on farmers and our association said Karnataka farmers association leader KS Puttannaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X